ಉದಯವಾಹಿನಿ, ಬೆಂಗಳೂರು: ಲೋಕಾಯುಕ್ತ ಪೊಲಿಸರು ಇಂದು ಬಾಗಲಕೋಟೆ ,ಚಿಕ್ಕಬಳ್ಳಾಪುರ,ತುಮಕೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿರುವ ತಹಶೀಲ್ದಾರ್ ಕಛೇರಿಯಲ್ಲಿ ಭೂಮಿಕೇಂದ್ರದಲ್ಲಿ ಶಿರಸ್ತೇದಾರ್ ಆಗಿರುವ ಮಹಾಂತೇಶ್ ಸುಭಾಷ್ ಉರಕಡ್ಲಿ ಅವರು ಆರ್‍ಟಿಸಿ ಕಾಲಂ-11ನಲ್ಲಿ ಇದ್ದಂತಹ ಕಡತವನ್ನು ತೆಗೆಯುವ ನಿಟ್ಟಿನಲ್ಲಿ 10 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್‍ಫೆಕ್ಟರ್‍ಗಳಾದ ಬಿಎಂ ಅವತಿ, ಬಿ ಜೆ ಪಾಟೀಲ್ ಅವರ ನೇತೃತ್ವದ ತಂಡ ನಡೆದ ಕಾರ್ಯಾಚರಣೆಯಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪ್ರಸ್ತುತ ಅಧಿಕಾರಿಯನ್ನು ದಸ್ತಗಿರಿ ಮಾಡಲಾಗಿದ್ದು, ಮಂಜುನಾಥ್ ಎಂ ದಳವಾಯಿ ಎಂಬುವವರು ನೀಡಿದ ದೂರಿನನ್ವಯ ಈ ಟ್ರಾಫ್ ಕಾರ್ಯಾಚರಣೆ ನಡೆದಿತ್ತು. ಇನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಲೇಬರ್ ಇನ್ಸ್‍ಫೆಕ್ಟರ್ ಪರವಾನಿಗೆ ನೀಡಲು 5 ಸಾವಿರ ಲಂಚ ಆಪೇಕ್ಷಿಸಿ, 1 ಸಾವಿರ ಮುಂಗಡ ಪಡೆದು ಇಂದು ಮೂರುವರೆ ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಟ್ರಾಫ್‍ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಕಿ ಉಳಿದಿದ್ದ ಕಾರ್ಮಿಕ ಪರವಾನಿಗೆ ಕಡತವನ್ನು ವಿಲೇವಾರಿ ಮಾಡಲು ಇವರು ಬಿ ಚಂದ್ರಶೇಖರ್ ರೆಡ್ಡಿ ಅವರಿಂದ ಲಂಚ ಆಪೇಕ್ಷಿಸಿದ್ದರು. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಕಾರಿ ತಿಳಿಸಿದ್ದಾರೆ. ತುಮಕೂರಿನ ಮಧುಗಿರಿ ಸಭ್ ಜೈಲಿನಲ್ಲಿ ಜೈಲರ್ ದಿವೀಂದ್ರಪ್ಪ ಅರ್ ಕೊನಿ ಅವರು ಜೈಲಿನಲ್ಲಿದ್ದ ತಂದೆ ನೋಡಲು ಬಂದಿದ್ದ ವ್ಯಕ್ತಿಯಿಂದ 5ಸಾವಿರ ಲಂಛ ಪಡೆಯುವಾಗ ಲೋಕಾಯುಕ್ತ ಪೊಲಿಸರ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
