ಉದಯವಾಹಿನಿ ಚಿತ್ರದುರ್ಗ: ತಾಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ  ಗೊನೂರು ನಿರಾಶ್ರಿತರ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ 38ನೇ ರಾಷ್ಟ್ರೀಯ ನೇತ್ರದಾನ ಪಕ್ಷಿಕ ಅಗಸ್ಟ್ 25 ರಿಂದ ಸೆಪ್ಟಂಬರ್ 8 ರ ತನಕ ಜರುಗಲಿರುವ ನೇತ್ರದಾನ ಪಕ್ಷಿಕಕ್ಕೆ ಚಾಲನೆ ನೀಡಿ ತಾಲೂಕ್ ಆರೋಗ್ಯ ಅಧಿಕಾರಿ ಡಾಕ್ಟರ್ರ್ ಮೇಘನಾ ಮಾತನಾಡುತ್ತಾ ಎಲ್ಲರೂ ಜೀವನ ಸಾರ್ಥಕತೆ ಪಡಿಸಿಕೊಳ್ಳಲು ಏನನ್ನಾದರೂ ಮಾಡಬೇಕು ಎಂದು ಆಲೋಚಿಸುತ್ತಿರುತ್ತಾರೆ ಅದರಂತೆ ನೇತ್ರದಾನವನ್ನು ಹೇಗೆ ಮಾಡಬೇಕು ಯಾವ ದಾಖಲಾತಿಗಳನ್ನು ನೀಡಬೇಕು ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಕೊರತೆ ಇರುತ್ತದೆ ಈ ಮಾಹಿತಿಯನ್ನು ನೀಡುವುದಕ್ಕೋಸ್ಕರ ನೇತ್ರದಾನದ ಮಹತ್ವವನ್ನು ಸಾರುವುದಕ್ಕಾಗಿ ಈ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಆಯೋಜಿಸಲಾಗಿದೆ  ಈ ದಿನ ನಮ್ಮೊಂದಿಗೆ ಜಿಲ್ಲಾಸ್ಪತ್ರೆಯ ನೇತ್ರಾಧಿಕಾರಿಗಳು ಆನ್ಲೈನ್ ಮೂಲಕ ತಮ್ಮ ಹೆಸರುಗಳನ್ನ ನೇತ್ರದಾನಕ್ಕೆ ನೋಂದಾಯಿಸಲಿದ್ದಾರೆ ನಿರಾಶ್ರಿತ ಕೇಂದ್ರದ ಸಿಬ್ಬಂದಿಗಳು ಆಸಕ್ತ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಿ ನೇತ್ರದಾನ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು ಜಿಲ್ಲಾಸ್ಪತ್ರೆಯ ಜಿಲ್ಲಾ ನೇತೃ ತಜ್ಞರಾದ ಡಾಕ್ಟರ್ ಪ್ರದೀಪ್ ರವರು ಮಾತನಾಡಿಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂದರಿಗೆ ದೃಷ್ಟಿ ನೀಡುತ್ತದೆ  ಅಂದಾಜು ಒಂದು ಕೋಟಿ ಇಪ್ಪತ್ತೈದು ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂದತ್ವದಿಂದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿದ್ದಾರೆ ಹೆಚ್ಚು ಹೆಚ್ಚು ನೇತ್ರದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿ ಎಂದರು ಕಾರ್ಯಕ್ರಮದಲ್ಲೇ ನೇತ್ರಾಧಿಕಾರಿ ನೇತೃ ತಜ್ಞರು ಕಣ್ಣಿನ ತಪಾಸಣೆ ನಡೆಸಿದರು ತಾಲೂಕ್  ಆರೋಗ್ಯ ಶಿಕ್ಷಣಾಧಿಕಾರಿ ಎನ್ಎಸ್ ಮಂಜುನಾಥ್   ಜಿಲ್ಲಾಸ್ಪತ್ರೆಯ ನೇತ್ರಾಧಿಕಾರಿ ಕೆ ರಾಮು  ಹಿರಿಯ ಆರೋಗ್ಯ  ನಿರೀಕ್ಷಣಾಧಿಕಾರಿ ಶ್ರೀಧರ್ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ನಿರಾಶ್ರಿತ ಕೇಂದ್ರದ ವ್ಯವಸ್ಥಾಪಕ ಮಹದೇವಯ್ಯ ಸಿಬ್ಬಂದಿಗಳು ನಿರಾಶ್ರಿತ ಕೇಂದ್ರದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 19 ಜನ ಸಿಬ್ಬಂದಿಗಳು ನೇತ್ರದಾನ ಮಾಡಲು ಮುಂದೆ ಬಂದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ನಿರಾಶ್ರಿತರ ಕೆಂದ್ರದ ಸದಸ್ಯರಿಗೆ ಕಣ್ಣಿನ ಆರೋಗ್ಯ ಹೆಚ್ಚಿಸುವ ಯೋಗಿಕ್ ಕ್ರಿಯೆಗಳನ್ನು ಅಭ್ಯಾಸ ಮಾಡಿಸಿ ಕಣ್ಣಿನ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು.

Leave a Reply

Your email address will not be published. Required fields are marked *

error: Content is protected !!