ಉದಯವಾಹಿನಿ ದೇವರಹಿಪ್ಪರಗಿ: ನಾವು ಜೀವನದಲ್ಲಿ ಸುಂದರ ಬದುಕನ್ನು ರೂಪಿಸಿಕೊಳ್ಳಲು ಶರಣರ ವಚನಗಳು ತುಂಬಾ ಸರಳ ಮತ್ತು ಸಹಕಾರಿಗಳಾಗಿವೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಎನ್ ಬಸವರಡ್ಡಿ ಹೇಳಿದರು. ಪಟ್ಟಣದ ಬಸವನಗರದ ಬಸವ ನಿಲಯದಲ್ಲಿ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತೋತ್ಸವದಂದು ವಚನ ದಿನೋತ್ಸವ-2023ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನಗಳು ಒಂದು ಅಮೂಲ್ಯ ನಿಧಿ, ಅರಿತರೇ ಶರಣ ಮರೆತರೆ ಮಾನವ ಎನ್ನುವಂತೆ ವಚನಗಳ ವಿಚಾರವನ್ನು ನಾವು ಅರಿತು ನಡೆಯಬೇಕಾಗಿದೆ, ವಚನಗಳ ಓದಿನ ಹಿನ್ನೆಲೆಯಲ್ಲಿ ನಮಗೆ ನಾವು ನೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ ಎಂಬ ಸತ್ಯವನ್ನು ಅರಿಯಬೇಕಿದೆ, ಇಂಥ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಜನ ಭಾಗವಹಿಸಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಮಾರಿ ಶ್ರೀನಿಧಿ ಹಾಗೂ ಸಾನ್ವಿ ವಚನ ಗಾಯನ ಪ್ರಸ್ತುತಪಡಿಸಿದರು.ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಮಹಿಳೆಯರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!