
ಉದಯವಾಹಿನಿ ಇಂಡಿ : ತಾಲೂಕಿನ ಮಿನಿ ವಿಧಾನಸೌಧಲಿ ಬ್ರಹ್ಮ ಶ್ರೀ ನಾರಾಯಣ್ ಗುರು ಹಾಗು ನುಲಿಯ ಚಂದಯ್ಯ ಅವರ ಜಯಂತಿ 31 ಅಗಸ್ಟ್ ರಂದು ವ್ಯವಸ್ಥಿತವಾಗಿ ಆಚರಣೆ ಮಾಡಲು ತಹಶಿಲ್ದಾರ ಬಿ.ಎಸ್. ಕಡಕಬಾವಿ ಮಂಗಳವಾರ ಪೂರ್ವಭಾವಿ ಸಭೆ ಮಾಡಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಶ್ರೀ ಬ್ರಹ್ಮ ನಾರಾಯಣ್ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ನುಲಿಯ ಚಂದಯ್ಯ ಹಾಗೂ ಶ್ರೀ ಬ್ರಹ್ಮ ನಾರಾಯಣ ಗುರು ಸಾಮಾಜಿಕ ಕೆಲಸಗಳು ಇಡೀ ಸಮಾಜಕ್ಕೆ ಮಾದರಿಯಾಗಿವೆ. ಇವರ ತತ್ವ ಆದರ್ಶಗಳು ಇಂದಿನ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಎಲ್ಲಾ ಕಡೆಯೂ ಜಯಂತಿ ನಡೆಯಲಿದೆ. ಅದರಂತೆ ತಾಲೂಕಿನಾದ್ಯಾಂತ ಎಲ್ಲಾ ಇಲಾಖೆಯಲ್ಲಿಯೂ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನ ಹಾಗೂ ಶಿಷ್ಟಾಚಾರ ಪಾಲಿಸಿ ಆಚರಣೆ ಮಾಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮಾತಾನಾಡಿದ ಅವರು, ಅತೀ ಹೆಚ್ಚಿನ ತಾಲೂಕು ಅಧಿಕಾರಿಗಳು ಯಾವುದೇ ಜಯಂತಿ ಪೂರ್ವಭಾವಿ ಸಭೆ ಹಾಗೂ ಜಯಂತಿಯಲ್ಲಿ ಪಾಲ್ಗೊಳ್ಳದೆ ಸರಕಾರದ ಆದೇಶಕ್ಕೆ ಮತ್ತು ಇಂತಹ ಶ್ರೇಷ್ಠ ಚಿಂತಕರಿಗೆ, ಮಹನೀಯರಿಗೆ ಅವಮಾನಿಸದಂತೆ ಎಂದು ಹೇಳಿದರು. ಈ ಬಗ್ಗೆ ಅತೀವ ಕಾಳಜಿ ವಹಿಸಿ ಮುಂದಿನ ಸಭೆಯಲ್ಲಿ ಯಾರೊಬ್ಬರೂ ಗೈರು ಹಾಜರಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರು. ಇನ್ನೂ ಕಂದಾಯ ಇಲಾಖೆ ಶಿರಸ್ತೆದಾರ ಬಿ.ಎ. ರಾವೂರ ಸ್ವಾಗತ ಕೋರಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
