
ಉದಯವಾಹಿನಿ ಯಾದಗಿರಿ : ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಅವರ ಸಂಪರ್ಕಕೊಂಡಿಯಾಗಿ ಶ್ರದ್ಧೆಯಿಂದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಯಾದಗಿರಿ ಶಾಸಕರಾದ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು. ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಹತ್ತಿರದಲ್ಲಿ ಶಾಸಕ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೋರ್ಟ್, ತಹಸಿಲ್ ಹೀಗೆ ಹಲವು ಕಚೇರಿಗಳು ಸಮೀಪ ಇರುವ ಕಾರಣ ಕೇಂದ್ರ ಭಾಗದಲ್ಲಿ ಕಚೇರಿ ಉದ್ಘಾಟಿಸಲಾಗಿದ್ದು, ಯಾದಗಿರಿ ನಗರ ಮತ್ತು ಯಾದಗಿರಿ ತಾಲೂಕು ಮುನ್ನಡೆಗೆ ತರಲು ಕಾರ್ಯಾರಂಭ ಮಾಡುತ್ತೇನೆ ಎಂದರು.ಸುತ್ತಲಿನ ಸಾರ್ವಜನಿಕರು ಕಚೇರಿಗೆ ಬಂದು ತಮ್ಮ ಸಮಸ್ಯೆಗಳ ಕುರಿತಾಗಿ ಸಮಾಲೋಚನೆ ನಡೆಸಲು ನಾನು ಜೊತೆಗೆ ಕಚೇರಿಯ ಸಿಬ್ಬಂದಿಗಳು ಸನ್ನದ್ಧರಾಗಿರುತ್ತಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸ್ಥಳೀಯರಾದ ಬಸ್ಸುಗೌಡ ಬಿಳರ್, ಶ್ರೀನಿವಾಸರೆಡ್ಡಿ ಚನ್ನುರ್, ಶರಣಗೌಡ ತಂಗಡಗಿ, ವೆಂಕಟರೆಡ್ಡಿ ವನಕೇರಿ, ನರಸಪ್ಪ ಬಾಗ್ಲಿ, ಅಂಬ್ರೇಶ್ ಜಾಕಾ, ತಿಪ್ಪಣ್ಣ ನಾಯಕ, ರಾಘವೇಂದ್ರ ಖಾನಾಪುರ, ಅಶೋಕರೆಡ್ಡಿ ಕುರಿಯಾಳ, ಶರಣಗೌಡ ಮಾಲಿ ಪಾಟೀಲ್, ಸೋಮಶೇಖರ್ ಮಸಕನಹಳ್ಳಿ, ಸಾಬಣ್ಣ ಬಾಡಿಯಾಲ್, ಸಿದ್ದಾರೆಡ್ಡಿಗೌಡ ಚಟ್ನಳ್ಳಿ, ಬಾಬುಗೌಡ ಮಾಚನೂರ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
