
ಉದಯವಾಹಿನಿ ಸಿಂಧನೂರು: ಭಾವನೆಗಳ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ನಾಡುನುಡಿಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ನಾಡಿನಲ್ಲಿ ಅನೇಕ ಸಾಹಿತಿಗಳು ಮಾಡಿ ಹೋಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ, ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ನಗರದ ಪಾಟೀಲ ಅಕಾಡೆಮಿ ಮಹಿಳಾ ದೂದ್ದುಪುಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಜಮಾಅತೆ ಇಸ್ಲಾಮೀ ಹಿಂದ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ, ಹಾಗೂ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಸರಣಿ-೧೭ ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ತನ್ನದೇ ಆದಂತಹ ವಿನೂತನ ಕಾರ್ಯ ಚಟುವಟಿಕೆಗಳ ಸಾಹಿತ್ಯ, ಕವಿಗಳು, ನಾಡುನುಡಿಗಳ ಸಂಸ್ಕೃತಿಯ ಬಗ್ಗೆ ಅನೇಕಾನೇಕ ಕಾರ್ಯಕ್ರಮಗಳನ್ನು ಮಾಡಿ, ಅತ್ಯುತ್ತಮ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಹೊರ ಹೊಮ್ಮಿದೆ ಎಂದರೆ ತಪ್ಪಾಗಲಾರದು.
ಈ ಬಹುಭಾಷಾ ಕವಿಗೋಷ್ಠಿ ಅರ್ಥಪೂರ್ಣವಾದದು. ತಮ್ಮದೇ ಆದ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ಕವಿಗೋಷ್ಠಿಯಲ್ಲಿ ಪ್ರಸ್ತಾಪ ಮಾಡಲು ಅನೇಕ ದೂರದ ಊರುಗಳಿಂದ ಬಂದಿದ್ದೀರಿ, ಸಾಹಿತ್ಯದ ಮೆರಗು ಮತ್ತು ಸೊಬಗು ಹೆಚ್ಚಿಸುವ ಕೆಲಸವನ್ನು ಕೂಡ ತಾವೆಲ್ಲರೂ ಮಾಡುತ್ತಿರುವುದು ಸಂತೋಷದ ಸಂಗತಿ.ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕ ಸೇರಿದಂತೆ ಗ್ರಾಮೀಣ ಭಾಗಕ್ಕೂ ಪಾದಾರ್ಪಣೆ ಮಾಡಿ, ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ನಾನು ಪ್ರತಿಭೆಗಳಿಗೆ ರಾಜ್ಯ ಸರ್ಕಾರದಿಂದ ಏನೆಲ್ಲಾ ಸೌಲಭ್ಯ ಸಿಗಬೇಕು ಅವುಗಳನ್ನು ಪಡೆಯಲು ನಾವು ನೀವೆಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೋಣ, ಪ್ರಾಸ್ತಾವಿಕವಾಗಿ ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿದರು.
ಈ ಸಂ: ಮೌಲಪ್ಪ ಮಾಡಶಿರವಾರ, ಶೇಖ್ ಬಸೀರ್ ಏತ್ಮಾರಿ, ಗುಂಡುರಾವ್ ಚನ್ನಳ್ಳಿ, ಬಸವರಾಜ ಗಸ್ತಿ, ಬಿ, ಕೋಟ್ರೇಶ, ವೆಂಕನಗೌಡ ವಟಗಲ್, ದೌವಲಸಾಬ್ ದೊಡ್ಮನಿ, ಶಾಂತ ಒಳಗಿನ ಮನೆ, ಆನಂದಿ ಲಾಹೋಟಿ, ಸಂಗೀತಾ ಸಾರಂಗಮಠ, ಭಾರತಿ ತಿವಾರಿ, ಮೌಲಾಸಾಬ ಪರಾಪುರ ಶಿಕ್ಷಕರು. ಸೇರಿದಂತೆ ಸಾಹಿತಿಗಳು, ಬುದ್ದಿಜೀವಿಗಳು, ಪ್ರಗತಿಪರರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
