
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ದುಗಲಮ್ಮರಸ್ತೆ, ಫ್ರೆಂಡ್ಸ್ ಸರ್ಕಲ್ ಹತ್ತಿರ ಮತ್ತು ಶಿವಪುರ ಒಳ ಚರಂಡಿ ಕಾಮಗಾರಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಚಾಲನೆ ನೀಡಿದರು.ಇದೆ ವೇಳೆ ಸಾರ್ವಜನಿಕರ ಕುಂದು ಕೊರತೆಗಳು ಆಲಿಸಿ ನಿಮ್ಮ ಸಮಸ್ಯೆಗಳಿಗೆ ಶೀಘ್ರದಲ್ಲಿ ಬಗಿಹರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಶ್ರೀಮತಿ ಲಲಿತಾ ತಿಮ್ಮನಂಜಯ್ಯ, ಕೈಗಾರಿಕಾ ಪ್ರದೇಶ ವಾರ್ಡಿನ ಬಿಜೆಪಿ ಅಧ್ಯಕ್ಷ ನಿಸರ್ಗ ಕೆಂಪರಾಜು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸತೀಶ್ ಜೆವಿಎಸ್, ರಮೇಶ್,ರವಿ, ಆಂಜನಪ್ಪ, ಮಂಡ್ಯ ರವಿ, ಗುತ್ತಿಗೆದಾರ ಚಂದನ್ ಗೌಡ, ಗುಂಡಪ್ಪ, ಬಿಡಬ್ಲ್ಯೂ ಎಸ್ ಎಸ್ ಇಂಜಿನಿಯರ್ ಮತ್ತು ಸಿಬ್ಬಂದಿ ವರ್ಗ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
