ಉದಯವಾಹಿನಿ ಇಂಡಿ :  ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿ  ಯೋಜನೆಗೆ ಇಂದು ಚಾಲನೆ ನೀಡಲಾಗುವದೆಂದು ಇಂಡಿ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಜಾವೀದ  ಮೋಮಿನ್ ತಿಳಿಸಿದ್ದಾರೆ.ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾ.ಪಂ ಕೇಂದ್ರ ಸ್ಥಳ ಹಾಗೂ ಇಂಡಿ ನಗರದ ಶ್ರೀ  ಬಸವರಾಜೇಂದ್ರ ಮಂಗಲ  ಕಾರ್ಯಾಲಯ, ಗುರು ಭವನ, ದರ್ಗಾ ಓಣ ,ಸ್ಟಾರ್ ಫಂಕ್ಸನ್ ಹಾಲ್ ಮತ್ತು ಆದರ್ಶ ವಿದ್ಯಾಲಯದಲ್ಲಿ ಸದರಿ ಕಾರ್ಯಕ್ರಮದ ಉದ್ಘಾಟನೆ ಮೈಸೂರಿನಿಂದ ನೇರ ಪ್ರಸಾರ ವ್ಯವಸ್ಥ ಕಲ್ಪಿಸಿದೆ.ಇಂಡಿ ತಾಲೂಕಾ ಆಡಳಿತ ವತಿಯಿಂದ ಶ್ರೀ ಬಸವರಾಜೇಂದ್ರ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ಉದ್ಘಾಟನೆ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸುವರು.ಪಕ್ಷದ ಕಾರ್ಯಕರ್ತರು, ಮಹಿಳಾ ಯಜಮಾನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ  ಮೋಮೀನ್,ನಿರ್ಮಲಾ ತಳಕೇರಿ ಹಾಗೂ ಶೈಲಜಾ ಜಾಧವ ಇಂಡಿ ಮತ್ತು ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ತಾಲೂಕಾ ಆಡಳಿತ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸುಮಂಗಲಾ ಹಿರೇಮನಿ ಈಗಾಗಲೇ 67 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಕಾರ್ಯಕ್ರಮಕ್ಕೆ ಚಾಲನೆ ಮಾಡುವ ಮೂಲಕ ಕುಟುಂಬದ ಯಜಮಾನಿಗೆ  ಪ್ರತಿ ತಿಂಗಳು ರೂ 2000 ಜಮಾ ಮಾಡಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!