ಉದಯವಾಹಿನಿ ಕೆ.ಆರ್.ಪೇಟೆ: ಅವೈಜ್ಞಾನಿಕವಾಗಿ ನೊಂದಣಿ ದರವನ್ನು ಹೆಚ್ಚಳಮಾಡದೇ ಜನಸ್ನೇಹಿಯಾಗಿ 20% ಒಳಗೆ ದರ ಹೆಚ್ಚಳ ಮಾಡುವಂತೆ ಉಪನೊಂದಣಾಧಿಕಾರಿಗಳಿಗೆ ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ಮಂಜುನಾಥ್ ಮನವಿ ಮಾಡಿದ್ದಾರೆ. ಈ ಕುರಿತು ತಾಲೂಕು ಉಪನೊಂದಣಾಧಿಕಾರಿಯವರಿಗೆ ಮನವಿ ಸಲ್ಲಿಸಿರುವ ಅವರು ಇಲಾಖೆಯ ವತಿಯಿಂದ ದರ ಹೆಚ್ಚಳಮಾಡಲು ನಿರ್ಧಾರಮಾಡಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದು ಈಗ ದರ ಹೆಚ್ಚಳ ಮಾಡಿರುವುದು ಅವೈಜ್ಞಾನಿಕವಾಗಿರುವುದರ ಜೊತೆಗೆ ಜನರಿಗೆ ಹೊರೆಯಾಗುವಂತೆ ನಿರ್ಣಮಾಡಲಾಗಿದೆ. ಎಲ್ಲಾ ಭಾಗದಲ್ಲಿಯೂ ಶೇ 80 ರಿಂದ 130 ವರೆವಿಗೆ ದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದಂತಿದ್ದು ಇದರಲ್ಲಿ ಸಾಕಷ್ಟು ಅವೈಜ್ಞಾನಿಕವಾಗಿದೆ. ಕುಂಭಮೇಳ ನಡೆಯುವ ರಸ್ತೆ ಎಂದು ತಾವು ಅಂಬಿಗರಹಳ್ಳಿ ಗ್ರಾಮದಲ್ಲಿ ಇರುವ ಕೃಷಿ ಒಂದು ಚದರ ಮೀಟರ್‌ಗೆ ಭೂಮಿಗೆ ಇದ್ದಂತಹ ರೂ ೧೯೦೦೦೦ ಮೌಲ್ಯವನ್ನು ತಾವು ಈಗ 75೦೦೦೦ ಕ್ಕೆ ಏರಿಸಿದ್ದೀರಿ ಅಂದೆ ಶೇ ೧೩೦ ಕ್ಕೂ ಹೆಚ್ಚಿಗೆ ದರ ನಿಗಧಿಮಾಡಿದ್ದೀರಿ ಆದರೆ ವಾಸ್ತವವಾಗಿ ಅಲ್ಲಿ ಕುಂಭಮೇಳೆ ನಡೆಯುವುದು 12 ವರ್ಷಕ್ಕೆ ಒಮ್ಮೆ ಮಾತ್ರ ಆದಾದ ನಂತರ ಅಲ್ಲಿ ಏನನ್ನು ಬೆಳೆಯಲಾಗದು ಜೊತೆಗೆ ತಾಲೂಕಿನಲ್ಲಿ ಬಹುತೇಕ ನೀರಾವರಿ ವಂಚಿತ ಹೊಬಳಿಗಳಾಗಿರುವ ಶೀಳನೆರೆ ಮತ್ತು ಸಂತೇಬಾಚಹಳ್ಳಿಗಳಲ್ಲಿಯೂ ಹೆಚ್ಚಳಮಾಡಿದ್ದೀರಿ. ಶೀಳನೆರೆ ಗ್ರಾಮದಲ್ಲಿ ಈ ಹಿಂದೆ ಇದ್ದಂತಹ ದರ ೧೩೫೦೦೦ ಆದರೇ ಈಗ ನೀವು ಹೆಚ್ಚಿರಿಸುವ ದರ 4೦೦೦೦೦ ಅಂದರೆ ಶೇ 130 ಕ್ಕೂ ಹೆಚ್ಚು, ಮುರುಕನಹಳ್ಳಿ ಗ್ರಾಮದಲ್ಲಿ 19೦೦೦೦ ರಿಂದ 475೦೦೦ ಕ್ಕೆ ಹೆಚ್ಛಳಮಾಡಿದ್ದಿರಿ. ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿ ಚದರ ಮೀಟರ್‌ಗೆ ೫೫೦೦ ರಿಂದ ೧೨೦೦೦ ಕ್ಕೆ ಏರಿಸಿದ್ದೀರಿ, ಮುಖ್ಯರಸ್ತೆಯಲ್ಲಿ ೩೨೦೦ ರಿಂದ ೬೮೦೦, ಐಟಿಐ ಕಾಲೇಜು ರಸ್ತೆಯಲ್ಲಿ 5200ರಿಂದ ೬೦೦೦ ಸಾವಿರ ಹೀಗೆ ಮನಸೋ ಇಚ್ಚೆ ನೊಂದಣಿ ದರವನ್ನು ಹೆಚ್ಚಳಮಾಡಿರುವುದು ಸರಿಯಾದ ಕ್ರಮವಲ್ಲ. ಇದು ಜನರಿಗೆ ಭಾರವಾಗುತ್ತದೆ ನಿಮ್ಮ ಇಲಾಖೆ ನೊಂದಣಿ ಶುಲ್ಕವನ್ನು ಶೇ ೮೦ ರಿಂದ ೧೩೦ ರಷ್ಟು ಹೆಚ್ಚಿಸುವ ಮೂಲಕ ಜನರ ಸುಲಿಗೆಮಾಡಲು ಹೊರಟಿದೆ ಆದುದರಿಂದ ತಾವುಗಳು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ದರವನ್ನು ನಿಗಧಿ ಮಾಡಬೇಕು ಎಂದು ಹೆಚ್.ಬಿ.ಮಂಜುನಾಥ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!