
ಉದಯವಾಹಿನಿ ಹೊಸಕೋಟೆ : ರಾಜ್ಯದ ಪ್ರತಿಯೊಂದುಗಡಿ ಭಾಗಗಳಲ್ಲಿ ವಿಭಿನ್ನವಾದ ಸಂಪ್ರದಾಯ ಉಡುಗೆ ತೊಡುಗೆ ಭಾಷಾ ವೈವಿದ್ಯತೆ ಕಾಣಬಹುದಾಗಿದೆಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ತಾಲೂಕಿನ ಗಣಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗೂರುಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಹಾಗೂ ಜೇನುಗೂಡು ರೂರಲ್ ಡೆವಲಪ್‌ಮೆಂಟ್ ಅ0ಡ್ ಕಲ್ಚರಲ್‌ಟ್ರಸ್ಟ್ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿದ್ದಗಡಿನಾಡು ಸಾಂಸ್ಕೃತಿಕಉತ್ಸವಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹೊಸಕೋಟೆತಾಲ್ಲೂಕು ವ್ಯಾಪ್ತಿಯಲ್ಲಿ ಜೇನುಗೂಡು ರೂರಲ್ ಡೆವಲಪ್‌ಮೆಂಟ್ ಅ0ಡ್‌ಕಲ್ಚರಲ್ ಟ್ರಸ್ಟ್ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿಕಾರ್ಯನಿರ್ವಹಿಸುತ್ತಿದೆ. ಕಲಾ ಪೋಷಕರಾಗಿ, ರಾಯಭಾರಿಯಾಗಿ ಕಾಯಕ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕಲಾ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ನಿರ್ಮಾಣ ಮಾಡಿಕೊಡುವುದು ಮೂಲ ಧ್ಯೇಯವಾಗಿದೆಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಕ್ಷö್ಮಣ್‌ಸಿಂಗ್ ಮಾತನಾಡಿ, ಗಡಿ ಭಾಗಗಳಲ್ಲಿ ಕನ್ನಡದಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಜೇನುಗೂಡು ಟ್ರಸ್ಟ್ ಹಾಗೂ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮ ಶ್ಲಾಘನೀಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂನ ಅಧ್ಯಕ್ಷ ಸಿ.ಯಲ್ಲಪ್ಪ, ಉಪಾಧ್ಯಕ್ಷೆ ಸಂಧ್ಯಾರಾಣಿ ಶ್ರೀನಿವಾಸ್, ಸಮಾಜ ಸೇವಕ ಬಿ.ಎಂ.ಪ್ರಕಾಶ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ಬಾಬುರೆಡ್ಡಿ, ಬಿಎಂಅರ್‌ಡಿ ಮಾಜಿ ಅಧ್ಯಕ್ಷಕೃಷ್ಣರೆಡ್ಡಿ, ರಂಗಕಲಾವಿದ ಡಿ.ಲಕ್ಷಿö್ಮನಾರಾಯಣ್, ಪಿಡಿಒ ಶೃತಿ, ಗ್ರಾಮದ ಮುಖಂಡರಾದ ಚ0ದ್ರಪ್ಪ, ಮುರುಗೇಶ್, ಟ್ರಸ್ಟಿನ ಅಧ್ಯಕ್ಷ ಎಸ್.ಕೆ.ರವಿಕಿರಣ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಮುನಿರಾಜು, ಹಿರಿಯ ಪತ್ರಕರ್ತ ಜಿ.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಹೆಚ್.ಕೆ.ಮಂಜುನಾಥ್ ಹಾಗೂ ಇತರರು ಇದ್ದರು.
