ಉದಯವಾಹಿನಿ ಬೆಂಗಳೂರು:  ಶ್ರೀಲಂಕಾದ ಯೂನಿವರ್ಸಿಟಿ ಸಭಾಂಗಣದಲ್ಲಿ ನಡೆದ 40ನೇ ಇಂಟರ್ ನ್ಯಾಷನಲ್ ಕಲ್ಬರಲ್ ಫೆಸ್ಟ್ ಕಾರ್ಯದಲ್ಲಿ ಜನಮಿತ್ರ ಪ್ರಾದೇಶಿಕ ಪತ್ರಿಕೆ ಪ್ರಧಾನ ಸಂಪಾದಕ ಹಾಗೂ ಏಷ್ಯಾ ಕಾರ್ಯನಿರತರ ಪತ್ರಕರ್ತರ ಸಂಘದ ಸಂಚಾಲಕ ಮತ್ತು ಐಎಫ್‌ಡಬ್ಲ್ಯೂ, ಅಪರ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಮದನಗೌಡ ಅವರಿಗೆ ಇಂಡೋ ಶ್ರೀಲಂಕಾ ಫ್ರೆಂಡ್‌ಶಿಪ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಶ್ರೀಲಂಕಾದ ಕ್ಯಾಬಿನೆಟ್ ಸಚಿವ ವಿದುರಾ ವಿಕ್ರಮನಾಯಕ, ಭಾರತೀಯ ರಾಯಭಾರ ಕಚೇರಿಯ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಡಾ. ಅಂಕುರನ್ ದತ್ತಾ, ಎಎಂಸಿಎ ಪ್ರೆಸಿಡೆಂಟ್ ಉಪುಲ್ ಜಯಕಾಂತ ಜಯಸಿಂಘ, ಕಾರ್ಯದರ್ಶಿ ಪತುಂ ವಿಕ್ರಮಾರ್ಥನೆ, ಐಸಿಎಫ್‌ ಛೇರ್ಮನ್ ಇಂಡಿಯಾ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಹಾಗೂ ಬೇಲೂರಿನ ಪತ್ರಕರ್ತರ ಬಿ.ಬಿ.ಶಿವರಾಜು ಮೊದಲಾದವರಿದ್ದರು ಹೆಚ್.ಬಿ.ಮದನಗೌಡರು ಮಾತನಾಡಿ ಪತ್ರಕರ್ತರ ಎಂದರೆ ವಿಶ್ವದಲ್ಲಿ ಇರುವ ಎಲ್ಲರು ಸ್ನೇಹಮಯ ವಾತವರಣದಿಂದ ಪತ್ರಕರ್ತರಿಗೆ ಎದುರಾಗುವ ಸಮಸ್ಯೆಗಳನ್ನು ಸಂಘಟನೆ ಮಾಡಿ ಹೋರಾಟದ ಮೂಲಕ ನಿವಾರಣೆ ಮಾಡಲು ಏಷ್ಯಾ ಕಾರ್ಯನಿರತ ಪತ್ರಕರ್ತರ ದಿಟ್ಟ ಹೆಜ್ಜೆ ಇಟ್ಟಿದೆ ಮತ್ತು ಸಹೋದರ ಸಂಸ್ಥೆಯಾದ ಅಖಿಲ ಭಾರತೀಯ ಪತ್ರಕರ್ತರ ಸಂಘವು ಸಹಕಾರ ನೀಡುತ್ತಿದೆ. ಇಂದು ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ರೀತಿಯಲ್ಲಿ ಪತ್ರಿಕೆಗಳಿಗೆ ಜಾಹಿರಾತು ನೀಡಿ ಪ್ರೋತ್ಸಹ ನೀಡಿದಾಗ ಪತ್ರಿಕೆಗಳು ಉಳಿಯಲು ಸಾಧ್ಯ. ಇಂಡೋ- ಶ್ರೀಲಂಕಾ ಫ್ರೆಂಡ್ ಶಿಪ್ ಅವಾರ್ಡ್ ಪ್ರಶಸ್ತಿಯನ್ನು ಕರ್ನಾಟಕ ಪತ್ರಕರ್ತರಿಗೆ ಸಂದ ಗೌರವ ಎಂಬ ಭಾವನೆ ನನ್ನದು. ಪತ್ರಿಕೆ ಮತ್ತು ಪತ್ರಕರ್ತ ಉಳಿಯಬೇಕಾದರೆ ಸಂಘಟನೆಗಳು ಚುರುಕಿನಿಂದ ಕೆಲಸ ಮಾಡಬೇಕು. ಪತ್ರಕರ್ತರಿಗೆ ವಸತಿ ಸೌಲಭ್ಯ ಮತ್ತು ಪಿಂಚಣಿ ಸೇವಾ ಸೌಲಭ್ಯ ಹಾಗೂ ಉಚಿತ ಆರೋಗ್ಯ ಸೇವೆ ಎಲ್ಲ ಪತ್ರಕರ್ತರಿಗೆ ಸಿಗಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!