
ಉದಯವಾಹಿನಿ,ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಗ್ರಾಮದಲ್ಲಿ “ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿಯಮಿತ” ವತಿಯಿಂದ ನೂತನ ಕಟ್ಟಡ ಹಾಗೂ 3000 ಲೀಟರ್ ಬಿ.ಎಂ.ಸಿ. ಉದ್ಘಾಟಿಸಿ ಮಾತನಾಡಿದ ಅವರು,ಇಡಿ ವಿಶ್ವದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಏಕೈಕ ರಾಷ್ಟ್ರ ಭಾರತವಾಗಿದೆ, ದೇಶವನ್ನು ಕಾಯುವ ಯೋಧರಿಗೆ ನಮ್ಮ ಜಿಲ್ಲೆಯ ಹಾಲು ರಫ್ತು ಮಾಡುತ್ತಿರುವುದು ಹೆಮ್ಮೆ ಪಡುವಂತಹ ವಿಚಾರ, ಮತ್ತು ಕಲಿಯುಗದ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನಿಗೆ ನಮ್ಮ ಜಿಲ್ಲೆಯ ಹಾಲು ಸಮರ್ಪಣೆಯಾಗುತ್ತಿದೆ, ಇಷ್ಟೆಲ್ಲಾ ಅದ್ಭುತ ಕೆಲಸಗಳಿಗೆ ಕಾರಣಕರ್ತರಾದ ರೈತ ಸಮುದಾಯಕ್ಕೆ ಅಭಿನಂದನೆಗಳು ಎಂದು ತಿಳಿಸಿದರು. ಹಾಲು ಉತ್ಪಾದಕರ ಸಂಘ ರೈತರಿಗಾಗಿ ರೈತರೆ ಸೃಷ್ಟಿಸಿರುವಂತ ಪಕ್ಷ ರಹಿತವಾಗಿ ರಾಜಕೀಯೇತರವಾಗಿ ಸ್ಥಾಪಿತವಾದ ಸಂಸ್ಥೆಯಾಗಿದೆ. ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ರಾಜಕಾರಣವನ್ನು ಬದಿಗೆಟ್ಟು ಕೃಷಿಕರ ಅಭಿವೃದ್ಧಿಗಾಗಿ ಹೈನುಗಾರಿಕೆಯನ್ನು ಉತ್ತೇಜಿಸಲು ಶ್ರಮವಹಿಸಬೇಕು.
ರೈತರ ಜೀವಾಳ ಹಾಲು ಉತ್ಪಾದನೆಯಾಗಿದ್ದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ, ಕರೋನ ಸಮಯದಲ್ಲಿ ಎಲ್ಲಾ ಆರ್ಥಿಕ ಕಾರ್ಯಚಟುವಟಿಕೆಗಳು ಸ್ಥಗಿತವಾಗಿದ್ದ ಸಮಯದಲ್ಲಿ ಹಾಲು ಉತ್ಪಾದನೆ ನಿರಂತರವಾಗಿ ನಡೆಯುತ್ತಿತ್ತು, ನಮ್ಮ ಸಂಸ್ಥೆಯು ಉತ್ತಮ ವೈದ್ಯರನ್ನು ಒಳಗೊಂಡಿದೆ, ಇದರೊಟ್ಟಿಗೆ ಹಾಲು ಉತ್ಪಾದನೆಗೆ ಅಗತ್ಯವಾಗಿ ಬೇಕಾಗಿದ್ದ ಮ್ಯಾಟ್ ಗಳನ್ನು ಒಳಗೊಂಡಂತೆ ಎಲ್ಲಾ ಸಲಕರಣೆಗಳನ್ನು ಪೂರೈಸಲಾಗಿದೆ, ಕೋಟಾದಡಿಯಲ್ಲಿ ಬಂದಂತ ಹಣದಲ್ಲಿ ಎಲ್ಲಾ ಸಹಕಾರಿ ಸಂಘಗಳಿಗೆ ಪೀಠೋಪಕರಣಗಳನ್ನು ಒದಗಿಸಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ನೀಡಲಾಗಿತ್ತು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ವ್ಯವಸ್ಥಾಪಕರಾದ ಕೆ ಬಿ ಮುರಳಿ, ಹಿರಿಯ ಉಪ ವ್ಯವಸ್ಥಾಪಕರಾದ ಕೆ ವೆಂಕಟರಮಣ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಗೌಡ, ಶಂಕರ್ ರೆಡ್ಡಿ ,ಮೋಹನ್ ಬಾಬು, ವಿಸ್ತರಣಾಧಿಕಾರಿ,ಬಾನು ಪ್ರಕಾಶ್, ಸದಾಶಿವ, ತಿಪ್ಪಾರೆಡ್ಡಿ, ರವೀಂದ್ರನಾಥ್, ಇತರರು ಉಪಸ್ಥಿತರಿದ್ದರು.
