
ಉದಯವಾಹಿನಿ, ಬಂಗಾರಪೇಟೆ: ವಿದ್ಯಾರ್ಥಿಗಳಲ್ಲಿ ಸೂಕ್ತವಾಗಿ ಹಾಡಿರುವ ಕಲಾ ಪ್ರತಿಭೆಯನ್ನು ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ಅನಾವರಣ ಮಾಡಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ, ಎಂದು ದೋಣಿಮಡುಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಜಯಣ್ಣ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಧೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಎಂಬುದು ಭೌದ್ಧಿಕ ವಿಕಾಸಕ್ಕೆ ಸೀಮಿತವಾಗಿ ಯಾಂತ್ರಿಕವಾಗಬಾರದು. ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ, ಹಾಗೂ ದೈಹಿಕ ವಿಕಾಸಕ್ಕೆ ಪೂರಕವಾಗಬೇಕು ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗಿದೆ,ಕಣ್ಮರೆಯಾಗುತ್ತಿದ್ದ ಜನಪದ ಸಾಹಿತ್ಯಕ್ಕೆ ಮೆರುಗು ತಂದ ಪ್ರತಿಭಾ ಕಾರಂಜಿ:
ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ, ಬೆಳೆದಂತೆಲ್ಲ ನಮ್ಮ ಗ್ರಾಮೀಣ ಭಾಗದ ಸೊಗಡು ಕಣ್ಮರೆಯಾಗುತ್ತಿತ್ತು ಆದರೆ ಪ್ರತಿಭಾ ಕಾರಂಜಿಯ ಮೂಲಕ ನಮ್ಮ ಗ್ರಾಮೀಣ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ, ಕ್ರೀಡೆ ಜನಪದ ಸಾಹಿತ್ಯವನ್ನು ಜೀವಂತವಾಗಿಸಲು ಸಹಕಾರಿಯಾಗಿದೆ.ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಾಗರತ್ನಮ್ಮ, ಸದಸ್ಯರಾದ ಸಂತೋಷ್, ಕೃಷ್ಣಪ್ಪ, ರಾಧಮ್ಮ ವೆಂಕಟೇಶ್, ಮುನಿಕೃಷ್ಣ ಸಿ, ರೈತ ಸಂಘ ಮುಖಂಡ ಮುನಿಕೃಷ್ಣ, ಆರ್ ಪಿ ವೆಂಕಟೇಶ್ ,ಹಾಗೂ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
