ಉದಯವಾಹಿನಿ ಮಾಗಡಿ : ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಗೆ ಬರುವ ಮಂಚನ ಬೆಲೆ ಜಲಾಶಯದಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಸುಪ್ರಸಿದ್ಧವಾದ ವಾತಾವರಣದ ಜಾಲತಾಣವಾಗಿದ್ದು ಸಂಪರ್ಕ ಸೇತುವೆಯಾಗಿದ್ದು. ಪ್ರೇಕ್ಷಕರು ವೀಕ್ಷಿಸುವ ಸಾವನದುರ್ಗ ಲಕ್ಷಾಂತರ ಜನರು ಓಡಾಡುವ ಸಂಪರ್ಕ ಸೇತುವೆ ಯೋಗ್ಯತೆ ಬಿದ್ದು ಸುಮಾರು ಮೂರು ವರ್ಷಗಳ ಕಳೆದರೂ ರಾಮನಗರ ಜಿಲ್ಲಾಧಿಕಾರಿಗಳಾಗಲಿ ಪಿಡಬ್ಲ್ಯೂಡಿ ಅಧಿಕಾರಿಗಳಾಗಲಿ ಈ ಹಿಂದೆ ಶಾಸಕರು ಇದ್ದ A ಮಂಜುನಾಥ್ ಆಗದೆ ಸಂಪರ್ಕ ಸೇತುವೆ ಬಗ್ಗೆ ಯಾರೂ ಸಹ ಕಾಳಜಿ ವಹಿಸಿರುವುದಿಲ್ಲ ಮಳೆಗಾಲದಲ್ಲಿ ಕುಸಿದು ಬಿದ್ದ ಸಂಪರ್ಕ ಸೇತುವೆ ಪಿಡಬ್ಲ್ಯೂ ಅಧಿಕಾರಿಗಳಾಗಲಿ ಗಮನಹರಿಸಿಲ್ಲ ಸಾವನದುರ್ಗ ಮಾರ್ಗವಾಗಿ ಹೋಗಬೇಕಾದರೆ ಸುಗ್ಗನಹಳ್ಳಿ ಮಾರ್ಗವಾಗಿ ಸಾವನ್ ದುರ್ಗಾ ಮಾಗಡಿ ತಲುಪುವ ಜನಸಾಮಾನ್ಯರ ತೊಂದರೆಯನ್ನು ಕೇಳುವರು ಯಾರು ಇಲ್ಲ ಈಗಿನ ಶಾಸಕರಾದ ಎಚ್ ಸಿ ಬಾಲಕೃಷ್ಣ ಅವರು ಅವರೇ ಆದ ಸರ್ಕಾರವಿದ್ದು ವಿವಿಧ ಯೋಜನೆ ಅಡಿಯಲ್ಲಿ ಸಂಪರ್ಕ ಸೇತುವೆಯನ್ನು ಹೊಸದಾಗಿ ಕಟ್ಟಲು ಮುಂದಾಗಬೇಕು ಸಂಪರ್ಕ ಸೇತುವೆಯಿಂದ ಸುತ್ತಮುತ್ತ ಹಳ್ಳಿಗಳಿಗೂ ಜನಸಾಮಾನ್ಯರ ನೋವುಗಳು ಸ್ಪಂದಿಸಿ ತಾಲೂಕ್ ಪಂಚಾಯಿತಿಯ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ನಿಗವಹಿಸಿ ಈ ಸಂಪರ್ಕ ಸೇತುವೆಯನ್ನು ಅತಿ ಶೀಘ್ರದಲ್ಲೇ ಪರಿಹಾರವನ್ನು ಕಂಡುಹಿಡಿದು ಸಂಪರ್ಕ ಸೇತುವೆ ಚಾಲನೆ ನೀಡಬೇಕು ಕೆಲವು ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಜನಸಾಮಾನ್ಯರು ಅಭಿಪ್ರಾಯ ಪಡುತ್ತಿದ್ದಾರೆ .
