ಉದಯವಾಹಿನಿ ಮುದ್ದೇಬಿಹಾಳ ; ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಮಂಗಳವಾರ ಕವಡಿಮಟ್ಟಿಯ ವೇದಮೂರ್ತಿ ಬಸವಪ್ರಭು ಹಿರೇಮಠ ಹಾಗೂ ಮಾವಿನಭಾವಿಯ ಬಸವರಾಜ ಗುರೂಜಿ ಅವರ ದಿವ್ಯ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತುಈ ವೇಳೆ ಮಾತನಾಡಿದ ಸೊಸೈಟಿಯ ಸಂಸ್ಥಾಪಕ ಆರ್ ಬಿ ಪಾಟೀಲ್ ವಕೀಲರು, ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕ ಪಿ.ಬಿ .ಕಾಳಗಿ ಮಾತನಾಡಿ ಮುದ್ದೇಬಿಹಾಳ ಶ್ರೀ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘ ತನ್ನ 25 ನೇ ವರ್ಷದ ರಜತ ಮಹೋತ್ಸವ ಆಚರಿಸುವ ಸಂದರ್ಭದ ನಿಮಿತ್ತ ಸಂಘದ ಮೊದಲ ಶಾಖೆಯನ್ನು ಹಿರೇಮುರಾಳ ಗ್ರಾಮದಲ್ಲಿ ಲೋಕಾರ್ಪಣೆ ಮಾಡಲಾಗಿದೆ ಶಾಖೆಯ ನಿರ್ಮಾಣಕ್ಕೆ ಸದಸ್ಯರ ಬೇಡಿಕೆ ತುಂಬಾ ಇತ್ತು ಶಾಖೆಯಿಂದ ಸದಸ್ಯರಿಗೆ ಅನುಕೂಲವಾಗಲಿದೆ ಸಹಕಾರಿ ಸಂಘದಿಂದ ಗ್ರಾಮೀಣ ಭಾಗದ ಜನಕ್ಕೆ ಮತ್ತು ವಿಶೇಷವಾಗಿ ರೈತಾಪಿ ವರ್ಗಕ್ಕೆ ಸಹಾಯವಾಗುತ್ತದೆ ಶ್ರೀ ಸಂಗಮೇಶ್ವರ ಸಹಕಾರಿ ಸಂಘ ಒಟ್ಟು 35 ಕೋಟಿ ರೂ ದುಡಿಯುವ ಬಂಡವಾಳವನ್ನು ಹೊಂದಿದೆ, ಸುಮಾರು 7 ಕೋಟಿ ರೂ ಸ್ವಂತ ಬಂಡವಾಳದ‌ ಜೊತೆ ಗೆ 25 ಕೋಟಿ ರೂ ಠೇವಣಿ ಸಂಗ್ರಹ ಮಾಡಿದೆ ಸಂಘ ಪ್ರಾರಂಭವಾದಾಗಿನಿಂದ ಲಾಭದಲ್ಲಿದ್ದು ಪ್ರತಿ ವರ್ಷ ಶೇ 10% ರಿಂದ 12% ರಷ್ಟು ಲಾಭಾಂಶ ಸದಸ್ಯರಿಗೆ ಕೂಡಮಾಡ್ತಿದೆ ಒಟ್ಟಾರೆ ಸಂಘ ಸರ್ವ ಸದಸ್ಯರ ವಿಶ್ವಾಸವನ್ನು ಹೊಂದಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು ಈ ಸಂದರ್ಭದಲ್ಲಿ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಣಮಂತ್ರಾಯಗೌಡ ಬಿರಾದಾರ, ಸಂಘದ ಅಧ್ಯಕ್ಷೆ ಸುಜಾತಾ ಕಾಳಗಿ, ಸಂಘದ ಉಪಾಧ್ಯಕ್ಷ ಬಸವರಾಜ ಡಮನಾಳ ಉಪಸ್ಥಿತರಿದ್ದರು ಗಣ್ಯರಾದ ಇಂಜಿನೀಯರ್ ಬಿ.ಬಿ.ಪಾಟೀಲ, , ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಕೆಸಾಪೂರದ ಶ್ರೀಶೈಲ ದೇಶಮುಖ, ನೆರಬೆಂಚಿಯ ಸಂಗಯ್ಯ ಹಾಲಗಂಗಾಧರಮಠ, ಬಿ.ಜಿ.ಜಗ್ಗಲ್ ವಕೀಲರು, ಶಿವಶಂಕರಗೌಡ ಹಿರೇಗೌಡರ, ನಿವೃತ್ತ ಶಿಕ್ಷಕ ಎನ್.ಎಸ್.ಪೋಲೇಶಿ, ಹಿರೇಮುರಾಳ ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಭೋವಿ, ನಾಗರಬೆಟ್ಟ ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ಪ್ಯಾಟಿ, ಹಿರೇಮುರಾಳ ಗ್ರಾಪಂ ಅಧ್ಯಕ್ಷ ದೇವಿಂದ್ರಪ್ಪ ಬೆಳ್ಳಿಕಟ್ಟಿ, ಮಲಗಲದಿನ್ನಿ ಪಿಕೆಪಿಎಸ್ ಅಧ್ಯಕ್ಷ ಹುಲ್ಲಪ್ಪ ಕುರವಗೌಡ್ರ ಶ್ರೀಶೈಲ ದೂಡಮನಿ,ರವೀಂದ್ರ ಬಿರಾದಾರ, ಬಸವರಾಜ ಭೋವಿ, ಹಿರೇಮುರಾಳ ಶಾಖೆಯ ಅಧ್ಯಕ್ಷ ಕಲ್ಲಣ್ಣ ಪ್ಯಾಟಿ,ಶ್ರೀಶೈಲ್ ರಾಯಗೂಂಡ,ಬಸನಗೌಡ ಪಾಟೀಲ್, ಸಂಘದ ಸಿಇಓ ಬಿ.ಎಂ.ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!