ಉದಯವಾಹಿನಿ ತಾಳಿಕೋಟಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಚಾಲನೆ ನೇರ ಪ್ರಸಾರ ಕಾರ್ಯಕ್ರಮಕ್ಕೆ ತಹಸಿಲ್ದಾರ್ ಕೀರ್ತಿ ಚಾಲಕ್ ಅವರು ಚಾಲನೆ ನೀಡಿದರು. ಬುಧವಾರ ಪುರಸಭೆ ಸಭಾಂಗಣದಲ್ಲಿ ತಾಲೂಕ ಆಡಳಿತ ಹಾಗೂ ಪುರಸಭೆ ವತಿಯಿಂದ ಆಯೋಜಿಸಿದ ಗೃಹಲಕ್ಷ್ಮಿ ಯೋಜನೆ ಚಾಲನೆಯ ನೇರ ಪ್ರಸಾರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಮತ್ವಾಂಕಾಂಕ್ಷೆ ಯೋಜನೆಯಾಗಿದೆ ಸ್ತ್ರೀ ಸಬಲೀಕರಣ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆಯ ಸದುಪಯೋಗವನ್ನು ಮಹಿಳೆಯರು ಮಾಡಿಕೊಳ್ಳಬೇಕು. ಈ ಯೋಜನೆಗೆ ನೋಂದಣಿ ಮಾಡಿಕೊಂಡ ಎಲ್ಲ ಮಹಿಳೆಯರ ಖಾತೆಗೂ ಹಣ ಜಮಾ ಆಗಲಿದೆ ಗೊಂದಲ ಬೇಡ ಇಂದು ಪಟ್ಟಣದ ನಾಲ್ಕು ಕೇಂದ್ರಗಳಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಈ ಯೋಜನೆಯ ಎಲ್ಲ ವಿವರಗಳು ತಮಗೆ ತಿಳಿಯುವಂತಾಗಲು ಕಾರ್ಯಕ್ರಮದ ಅಂತ್ಯದವರೆಗೂ ಶಾಂತರಿತಿಯಿಂದ ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ಚೋರಗಸ್ತಿ ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ ಸೈದಾಭಿ ಚಿತ್ತರಗಿ ಮುಖಂಡರಾದ ಕಾರ್ತಿಕ್ ಕಟ್ಟಿಮನಿ.ಹುಸೇನಸಾಬ ಜಮಾದಾರ.ಮಹಿಬೂಬ ಕೆಂಭಾವಿ ಮೋದಿನಸಾ ನಗಾಚಿ೯ ತಾಲೂಕ ಆಡಳಿತ ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಮಾರು 500 ಜನ ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯಕ್ರಮ ವನ್ನು ವೀಕ್ಷಿಸಿದರು.

Leave a Reply

Your email address will not be published. Required fields are marked *

error: Content is protected !!