ಉದಯವಾಹಿನಿ, ಮುಂಬೈ: ಗಣೇಶ ಉತ್ಸವ ಸೇರಿದಂತೆ ಹಬ್ಬದ ಋತುವಿನಲ್ಲಿ ವಿಶೇಷ ಸಂಸತ್ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶಿವಸೇನೆ ಉದ್ದವ್ ಠಾಕ್ರೆ ಬಣ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯ ನೀತಿ ಮತ್ತು ರೀತಿ ನೋಡಿದರೆ ಇದೇನಾ ಹಿಂದುತ್ವ ಎಂದು ನೇರವಾಗಿಯೇ ಶಿವಸೇನೆ ಉದ್ದವ್ ಠಾಕ್ರೆ ಬಣದ ನಾಯಕ ಅರವಿಂದ್ ಸಾವಂತ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಬ್ಬದ ಋತುವಿನಲ್ಲಿ ಅಧಿವೇಶನ ನಡೆಸಿದ ಉದಾಹರಣೆಯೇ ಇಲ್ಲ . ಇತಿಹಾಸದಲ್ಲಿ ಈ ರೀತಿಯ ಯಾವುದೇ ವಿಶೇಷ ಅಧಿವೇಶನ ಹಬ್ಬದ ಸಂದರ್ಭದಲ್ಲಿ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ಇತಿಹಾಸದಲ್ಲಿ ಉತ್ಸವದ ಸಂದರ್ಭದಲ್ಲಿ ಯಾವುದೇ ಅಧಿವೇಶನ ನಡೆದಿಲ್ಲ. ಗಣಪತಿ ಹಬ್ಬ ಆಚರಿಸುವ ದಿನಗಳಲ್ಲಿ ಅವರು ಅಧಿವೇಶನಗಳನ್ನು ನಡೆಸುತ್ತಿದ್ದಾರೆ. ಇದು ಅವರ ಹಿಂದುತ್ವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
