ಉದಯವಾಹಿನಿ ವೇಮಗಲ್: ಕೋಲಾರ ತಾಲೂಕಿನ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೇವರಹಳ್ಳಿ ಗ್ರಾಮದಲ್ಲಿ ಬಝ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಬಝ್‌ ಗೆಳತಿಯಾದ ಕಾಂತಲಕ್ಷ್ಮಿರವರ ಮನೆಯ ಬಳಿ ಪಾರಂಪರಿಕ ಪದ್ಧತಿಯನ್ನು ಅನುಸರಿಸಿ ನಿರ್ಮಿಸಿರುವ ನಾಟಿ ಕೋಳಿ ಘಟಕವನ್ನು ಬಝ್‌ ಸಂಸ್ಥೆಯ, ಕಾರ್ಯಕ್ರಮ ಮುಖ್ಯಸ್ಥರಾದ ಯಶೋಧ ಹೆ.ಎಂ ರವರು ಸದರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಝ್‌ ಸಂಸ್ಥೆಯು ತರಬೇತಿಗಳನ್ನು ಮಹಿಳೆಯರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣ ಮಾಡುತ್ತಿದ್ದು, ಕಾಂತಲಕ್ಷ್ಮಿ ತರಹ ಇನ್ನು ಹೆಚ್ಚಿನ ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕೆಂದು ಆಶಯ ವ್ಯಕ್ತಪಡಿಸಿದರು. ಕೋಲಾರ ಜಿಲ್ಲೆಯ ಬಝ್‌ ಸಂಸ್ಥೆಯ, ಜಿಲ್ಲಾ ಕಾರ್ಯಚರಣ ವ್ಯವಸ್ಥಾಪಕರಾದ ಅಯ್ಯಪ್ಪನ್‌.ಎಂ ರವರು ನಾಟಿ ಕೋಳಿ ಸಾಕಾಣಿಕೆಯು ನಮ್ಮ ಪಾರಂಪರಿಕವಾಗಿ ಬಂದಿದ್ದು, ಸ್ಥಳೀಯವಾಗಿ ಇರುವ ಸಂಪನೂಲಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಉತ್ಪಾಧಿಸಿ, ಸ್ಥಳೀಯವಾಗಿ ಪೂರೈಸುವುದು ನಮ್ಮ ಸಂಸ್ಥೆಯ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ನಾಟಿ ಕೋಳಿ ಸಾಕಾಣಿಕೆ ಇದರ ಒಂದು ಭಾಗವಾಗಿದೆ ಎಂದು ತಿಳಿಸಿದರು. ನಾಟಿ ಕೋಳಿ ತಿನ್ನುವುದರಿಂದ ಆಗುವ ಆರೋಗ್ಯ ಸುಧಾರಣೆ ಮತ್ತು ಹೆಚ್ಚು ಹೆಚ್ಚು ಜನ ನಾಟಿ ಕೋಳಿ ಸಾಕಾಣಿಕೆ ಮಾಡುವುದರಿಂದ ಮತ್ತು ಜನರು ಅದನ್ನು ಉಪಯೋಗಿಸುವುದರಿಂದ ಕೋಲಾರ ಜಿಲ್ಲೆಯ ಜನರ ಆರೋಗ್ಯ ಸುಧಾರಿಸಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಸಿರು ಕಾರ್ಯಕ್ರಮ ನಿರ್ವಾಹಕರಾದ ಯೋಗೀಶ್, ಸಹಾಯಕ ನಿರ್ವಾಹಕರಾದ ಚನ್ನಬಸವ, ಹಾಗೂ ದೇವರಹಳ್ಳಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!