
ಉದಯವಾಹಿನಿ,ಮಾಲೂರು:- ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ. ಹುರಳಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಡೀರ್ ಬೇಟಿ ನೀಡಿದ ಗ್ರಾ.ಪಂ.ಅಧ್ಯಕ್ಷ ಬ್ಯಾಲಹಳ್ಳಿ ಕೆ.ಚಂದ್ರಶೇಖರ್. ನೊಸಗೆರೆ ಗ್ರಾ.ಪಂ.ನ ಹುರಳಗೆರೆ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಪ್ರಾಥಮಿಕ ಕೇಂದ್ರದಲ್ಲಿ ಕುಂದು ಕೊರತೆಗಳನ್ನ ವಿಚಾರಿಸಿ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬಗ್ಗೆ ಪರಿಶೀಲಿಸಿದರು.ಈ ಸಂಧರ್ಭದಲ್ಲಿ ಕಟ್ಟಡ ಕಿಟಕಿ ದುರಸ್ತಿ, ಶೌಚಾಲಯ ದುರಸ್ತಿ , ಮಳೆ ಬಂದರೆ ಆಸ್ಪತ್ರೆ ಕೊಣೆಗೆ ನೀರು ನುಗ್ಗುತ್ತಿರುವುದು ಮೇಲ್ನೊಟಕ್ಕೆ ಕಂಡು ಬಂತು ಕೂಡಲೇ ಇದನ್ನು ಗ್ರಾ.ಪಂ.ತಾಲ್ಲೂಕು ಆರೋಗ್ಯ ಅಧಿಕಾರಿ, ಜಿಲ್ಲಾ ಆರೋಗ್ಯ ಕೇಂದ್ರ, ಜಿಲ್ಲಾಧಿಕಾರಿ ಗಳು ಹಾಗೂ ಶಾಸಕ ನಂಜೇಗೌಡರ ಗಮನಕ್ಕೆ ತಂದು ಅನುದಾನಗಳನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಒತ್ತು ನೀಡಲಾವುದು ಎಂದರು.ಈ ಸಂಧರ್ಭದಲ್ಲಿ ಸಿ.ಎಚ್ .ಓ ಸುನೀಲ್, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಎನ್.ಪ್ರಶಾಂತ್, ವಕೀಲ ಎಚ್.ಎಲ್.ನಾಗರಾಜ್, ರಮೇಶ್ ಇನ್ನಿತರರು ಹಾಜರಿದ್ದರು
