ಉದಯವಾಹಿನಿ ಪೀಣ್ಯದಾಸರಹಳ್ಳಿ : ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನ ಅಬ್ಬಿಗೆರೆಯ ಸುತ್ತಮುತ್ತಲ್ಲಿನ  ಜನರು  ವಾಸ ಮಾಡಿದ ನಾಗರೀಕರ ಆರೋಗ್ಯಕರ ಜೀವನಕ್ಕಾಗಿ ಶುಚಿಯಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕ್ಷೇತ್ರದ ಶಾಸಕ ಎಸ್ ಮುನಿರಾಜು ಉದ್ಘಾಟಿಸಿ ಮಾತನಾಡುತ್ತಾ ನಮ್ಮ  ಕ್ಷೇತ್ರದಲ್ಲಿ ಬಡವರು ಕೂಲಿ ಕಾರ್ಮಿಕರೇ ಹೆಚ್ಚಿನ ರೀತಿಯಲ್ಲಿ ವಾಸಿಸುತ್ತಿದ್ದಾರೆ ಆದರೆ ಕುಡಿಯುವ ನೀರನ್ನು ಹಣ ಕೊಟ್ಟು ಕೊಂಡುಕೊಳ್ಳಲು ಕೆಲವರು ಶಕ್ತರಿರುವುದಿಲ್ಲ ಆಗ ಬೇರೆ ಯಾವುದೋ ಕಲುಶಿತ ನೀರನ್ನು ಉಪಯೋಗಿಸುವುದರಿಂದ ಅವರಲ್ಲಿ ಅನಾರೋಗ್ಯವು ಹೆಚ್ಚಾಗುತ್ತದೆ ಆದ್ದರಿಂದ  ಕ್ಷೇತ್ರದ ಜನತೆಯ  ಆರೋಗ್ಯಕರ ಜೀವನ ಸಾಗಿಸುವ ಉದ್ದೇಶದಿಂದ ಈ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡುತ್ತಿದ್ದೇವೆ ಆದ್ದರಿಂದ ಈ ಶುದ್ಧ ಕುಡಿಯುವ ನೀರಿನ ಘಟಕದ ಉದ್ದೇಶವನ್ನು ನಗರದ  ಸುತ್ತಮುತ್ತಲಿನ  ನಾಗರಿಕರು ಈ ಘಟಕದ  ಸದುಪಯೋಗವನ್ನು ಪಡೆದು  ಬಳಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಬ್ಬಿಗೆರೆ ರಾಜಣ್ಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ ಮಹಿಳಾ ಮುಖಂಡರು ಕಾರ್ಯಕರ್ತರು ವಾರ್ಡಿನ  ನಾಗರಿಕರು ಇದ್ದರು

Leave a Reply

Your email address will not be published. Required fields are marked *

error: Content is protected !!