ಉದಯವಾಹಿನಿ ಕುಶಾಲನಗರ :-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ (ರಿ )ಟ್ರಸ್ಟ್ ಸೋಮವಾರಪೇಟೆ ತಾಲೂಕು. ಹಾಗೂ ಕುಶಾಲನಗರ ವಲಯ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ  ಕುಶಾಲನಗರ ವಲಯ ಇವರ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಎ ಪಿ ಸಿ ಎಂ ಎಸ್, ಭಾರತ್ ಗ್ಯಾಸ್ ಸಭಾಂಗಣದಲ್ಲಿ   ನಡೆಯಿತು. ಅಧ್ಯಕ್ಷತೆಯನ್ನು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ  ಶ್ರೀಮತಿ ರಾಧಾ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಮಂತರ ಗೌಡ ರವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ವಿವಿಧ  ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ ಮಂಜೂರಾತಿ  ಪತ್ರಗಳನ್ನು ವಿತರಣೆ ಮಾಡಿದರು. ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ, ಉತ್ತಮ ಅನುಕೂಲಗಳು ಆಗುತ್ತಿದ್ದು ಇದರ ಸದಾವಕಾಶ ಮಾಡಿಕೊಳ್ಳುವಂತೆ ತಿಳಿಸಿದರು, ಸರ್ಕಾರದಿಂದ ಯಾವುದೇ ಅನುದಾನಗಳು ವಿಳಂಬವಾದಲ್ಲಿ ತಮ್ಮನ್ನು ಸಂಪರ್ಕಿಸುವ ಬಗ್ಗೆ ಮಾಹಿತಿ ನೀಡಿದರು. ಧಾರ್ಮಿಕ ಆಚರಣೆಯಲ್ಲಿ ಮಹಿಳೆಯರ ಪಾತ್ರದ ಶ್ರೀಮತಿ ಮಾಲಾದೇವಿ ಶಿಕ್ಷಕರು( ಯುವಕವಿಯತ್ರಿ ) ಸುಂಟಿಕೊಪ್ಪ ಪ್ರೌಢಶಾಲೆ ಇವರು ನೀಡಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವಂತಹ  ಶ್ರೀ ಚಂದ್ರಮೋಹನ್, ಕುಶಾಲನಗರ  ಶ್ರೀ ಆಂಜನೇಯ ದೇವಸ್ಥಾನ  ಸಮಿತಿಯ ಅಧ್ಯಕ್ಷರಾದ ಶ್ರೀ ಪುಂಡರಿಕಾಕ್ಷ, ರಾಜಶೇಖರ್, ಮಹಾಲಕ್ಷ್ಮಿ ಬಂಡಾರ ಕುಶಾಲನಗರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿಗಳದ  ಶ್ರೀ ರೋಹಿತ್ ಎಚ್. ಉಪಸ್ಥಿತರಿದ್ದರು.  ಕಾರ್ಯಕ್ರಮದ ನಿರೂಪಣೆಯನ್ನು ವಲಯದ ಮೇಲ್ವಿಚಾರಕರಾದ  ಶ್ರೀಮತಿ ಪೂರ್ಣಿಮಾ ರವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!