ಉದಯವಾಹಿನಿ ಅಫಜಲಪುರ : 5 ಎಕರೆ ಹತ್ತಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು. ಸಾಲಶೂಲ‌ ಮಾಡಿ ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಬಾಯಿಗೆ ಬರದಂತೆ ಮಾಡಿದ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿದನೂರು ಗ್ರಾಮದಲ್ಲಿ ನಡೆದಿದೆ.ಹೌದು ತಾಲೂಕಿನ ಬಿದನೂರು ಗ್ರಾಮದ ಬಡ ರೈತ ತನ್ನ 5 ಎಕರೆ ಹೋಲದಲ್ಲಿ ಹತ್ತಿ ಬೆಳೆ ಬೆಳೆದಿದ್ದ. ಅದನ್ನ ಸಹಿಸಲಾಗದ ಕೀಡಿಗೇಡಿಗಳು ರಾತ್ರೋರಾತ್ರಿ ಟ್ರ್ಯಾಕ್ಟರ ಮೂಲಕ ಗಳೆ ಹೋಡೆದು ಸಂಪೂರ್ಣವಾಗಿ ಬೆಳೆ ನಾಶಮಾಡಿದ್ದ ಘಟನೆ ಜರುಗಿದೆ. ಸುಮಾರು 1.50 ಲಕ್ಷದವರೆಗೆ ಖರ್ಚು ಮಾಡಿ ರೈತ ಬೆಳೆ ಬೆಳೆದಿದ್ದ ಇನ್ನೆನೂ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಾಶೆಯಾಗಿದೆ. ಅದರಲ್ಲೂ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಹೆಂಗಾರು ಮಳೆಯ ನಂಬಿ ಬೆಳೆ ಮಾಡಿದ ರೈತರು ಈ ಮಳೆಯೂ ಇಲ್ಲ ಬೆಳೆಯು ಇಲ್ಲ ರೈತನ ಗೋಳು ಕೇಳೋರ್ಯಾರು.ಗ್ರಾಮದ ರೈತ ಈರಣ್ಣ ಕಲಶೆಟ್ಟಿ ಅವರಿಗೆ ಸೇರಿದ 5 ಎಕರೆ ಹೋಲದಲ್ಲಿನ ಹತ್ತಿ ಬೆಳೆ ನಾಶವಾಗಿದೆ. ಹೋಲದ ಬೆಳೆಯ ಮೇಲೆ ಜೀವನ ಸಾಗಿಸುವ ರೈತನ ಪಾಡು ಕೇಳುವವರಾರು ಎಂದು ರೈತ ತಮ್ಮ ಅಳಲನ್ನು ತೊಡಿಕೊಂಡಿದ್ದಾನೆ. ಒಂದು ಕಡೆ ಈ ವರ್ಷ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದ್ದು, ಎಲ್ಲಾ ರೈತರೂ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಬಿದನೂರು ಗ್ರಾಮದ ರೈತ ಈರಣ್ಣ ಕಲಶೆಟ್ಟಿ ಹೋಲದಲ್ಲಿ ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ಕೀಡಿಗೇಡಿಗಳು ನಾಶಮಾಡಿದ್ದಾರೆ. ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಹೋಲದಲ್ಲಿನ ಬೆಳೆ ನಾಶ ಮಾಡಿದ ಕೀಡಿಗೇಡಿಗಳನ್ನು ಬಂಧಿಸಿ, ಜಮೀನಿನಲ್ಲಾದ ಬೆಳೆಗೆ ಪರಹಾರ ನೀಡಬೇಕು ಎಂದು ಅಂಗಲಾಚಿದ್ದಾರೆ.

Leave a Reply

Your email address will not be published. Required fields are marked *

error: Content is protected !!