
ಉದಯವಾಹಿನಿ ಕುಶಾಲನಗರ:- ಕುಶಾಲ ನಗರ ಮಡಿಕೇರಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಅದೃಷ್ಟವತಾಸ್ ಯಾವುದೇ ಅಪಾಯ ಸಂಭವಿಸದೆ ಪಾರಾಗಿರುವ ಘಟನೆ ನಡೆದಿದೆ.ಕುಶಾಲನಗರದ ಕರ್ನಾಟಕದ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಎಂ ಕೃಷ್ಣ ಅವರು ಮಡಿಕೇರಿಯಿಂದ ಕುಶಾಲನಗರದ ಕಡೆಗೆ ತಮ್ಮ ಕಾರಿನಲ್ಲಿ KA12 P7905 ಬರುತ್ತಿದ್ದ ಸಂದರ್ಭ ಆನೇಕಾಡು ಅರಣ್ಯದ ಬಳಿ ಮರವೊಂದರ ಬೃಹತ್ ಕೊಂಬೆ ಕಾರಿನ ಮೇಲೆ ಬಿದ್ದಿದ್ದು ಕಾರು ಬಹುತೇಕ ಜಖಂ ಗೊಂಡಿದೆ. ಕಾರು ಚಾಲನೆ ಮಾಡುತ್ತಿದ್ದ ಕೃಷ್ಣ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಸ್ಥಳದಲ್ಲಿದ್ದ ಕೆಲವರು ರಕ್ಷಣೆ ಮಾಡಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಮಾಹಿತಿ ದೊರೆತ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವುಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. (ಕರ್ನಾಟಕ ರಾಜ್ಯ ಕಾವಲು ಪಡೆಯ ರಾಜ್ಯಾಧ್ಯಕ್ಷರಾದ ಮೋಹನ್ ಕುಮಾರ್ ಗೌಡ ಮತ್ತು ಪದಾಧಿಕಾರಿಗಳು ಕೃಷ್ಣ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು)
