
ಉದಯವಾಹಿನಿ,ಅಫಜಲಪುರ : ಒಂದು ದಿನ ಮಳೆ ಬಂದ್ರೆ ಸಾಕು, ಈ ಶಾಲೆಯ ದಾರಿ ಕೆರೆಯಾಗಿ ಹೋಗುತ್ತೆ ಇದೇನು ಮಲೆನಾಡು ಪ್ರದೇಶವು ಅಲ್ಲ ತೊಗರಿ ನಾಡು ಕಲಬುರ್ಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಶಾಲೆಯ ರಸ್ತೆ ಇದು ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ ಈ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದೇ ಯಕ್ಷಪ್ರಶ್ನೆಯಾಗಿದೆ ಇತ್ತ ಅಧಿಕಾರಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಯಾವಾಗ ಕಾಣ್ತೆರೆದು ನೋಡುತ್ತಾರೋ ಎಂದು ಕಾಯುತ್ತಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳು.
ಈ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಕ್ಕಳು ಕಾಲೇಜ್ ವಿದ್ಯಾರ್ಥಿಗಳು ಉರ್ದು ಪ್ರೌಢಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಯ ಎಲ್ ಕೆ ಜಿ ಯು ಕೆ ಜಿ ವಿದ್ಯಾರ್ಥಿಗಳು ಇದ್ದು ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೂ ಬಹಳ ತೊಂದರೆ ಯಾಗುತ್ತಿದೆ
ಮಂಜುನಾಥ ನಾಯಕೊಡಿ ಮಾತನಾಡಿ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ಮಳೆಯ ನೀರು ನಿಂತು ಕೇರೆಯ ರೀತಿಯಲ್ಲಿ ಮಾರ್ಪಟ್ಟಿದೆ ಇದರಿಂದಾಗಿ ಶಾಲೆಗೆ ಹೋಗುವ ಮಕ್ಕಳು ನೀರಿನಲ್ಲೆ ನಡೆದು ಕೊಂಡು ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ ಇನ್ನು ಕೆಲವು ವಿದ್ಯಾರ್ಥಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ಸಣ್ಣ ಪುಟ್ಟ ಗಾಯ ಹಾಗೂ ಬಟ್ಟೆ ಹಾಗೂ ಪುಸ್ತಕಗಳು ವದ್ದೆ ಮಾಡಿಕೊಂಡಿದ್ದಾರೆ ಇದರಿಂದಾಗಿ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ ಹೀಗಾಗಿ ಶೀಘ್ರದಲ್ಲೇ ಸ್ಥಳೀಯ ಗ್ರಾಮ ಪಂಚಾಯತಿ ಅಥವಾ ಶಿಕ್ಷಣ ಇಲಾಖೆಯಿಂದ ಈ ಸಮಸ್ಸೆಯನ್ನು ಬಗೆಹರಿಸಿ ಮಕ್ಕಳಿಗೆ ಶಾಲೆಗೆ ಹೋಗಲು ಅನುಕೂಲ ಮಾಡಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ…
