ಉದಯವಾಹಿನಿ,ಮಸ್ಕಿ: ತಾಲೂಕಿನಲ್ಲಿ ಭಾನುವಾರ ತಡ ರಾತ್ರಿ ಸುರಿದ ಉತ್ತಮ ಮಳೆಯಿಂದ ಬಾಡಿದ ಬೆಳೆಗಳಿಗೆ ಜೀವ ಬಂದಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡ್ಮೂರು ತಿಂಗಳಿನಿAದಲೂ ಮಳೆಯಾಗದೇ ಬಿಸಿಲಿನ ಧಗೆಗೆ ಬೆಳೆ ಒಣದಿದ್ದವು, ಸಾಲ ಸೂಲ ಮಾಡಿ ಭಿತ್ತನೆ ಮಾಡಿದ ರೈತ ಕಂಗಾಲಾಗಿದ್ದ, ಆದರೆ ಭಾನುವಾರ ರಾತ್ರಿ ಸುರಿದ ಮಳೆಯಿಂದ ತೊಗರಿ, ಹತ್ತಿ, ಸೂರ್ಯಕಾಂತಿ, ಸಜ್ಜೆ ಬೆಳೆಗಳು ಮರು ಜೀವ ಪಡೆದುಕೊಂಡಿದೆ. ಅದಲ್ಲದೇ ಸೋಮವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಸುರಿದಿದ್ದು, ಇಡೀ ದಿನ ಮಲೆನಾಡಿನಂತೆ ಬಾಸವಾಗಿದೆ. ನೀರಿಕ್ಷೀತ ಪ್ರಮಾಣದಲ್ಲಿ ಮಳೆಯಾಗದೇ ಹಿನ್ನಲೆಯಲ್ಲಿ ಸರಕಾರ ಕೆಲ ಪ್ರದೇಶಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಸಂದರ್ಭದಲ್ಲಿತ್ತು, ಅದರೆ ಮಳೆರಾಯ ಧರೆಗೆ ಇಳಿದು ಕರುಣೆ ತೋರಿಸಿದ್ದಾನೆ. ಬಾಡಿದ ಬೆಳೆಗಳೀಗೆ ಹಾಗೂ ಮೇವುಗಳಿಗೆ ಜೀವ ತುಂಬಿದ್ದಾನೆ. ತಾಲೂಕಿನಲ್ಲಿ ಭಾನುವಾರ ರಾತ್ರಿ ಮಸ್ಕಿ ಪಟ್ಟಣದಲ್ಲಿ 32.6ಮಿ.ಮೀ. ತಲೆಖಾನ 37.1ಮಿ.ಮೀ ಹಾಲಾಪೂರ ೪೫ಮಿ.ಮೀ ಪಾಮನಕೆಲ್ಲೂರು 24.4ಮಿ.ಮೀ ಬಳಗಾನೂರು 38ಮಿ.ಮೀ ಗುಡದೂರು 49.5ಮಿಮೀ ನಷ್ಟು ಮಳೆಯಾಗಿದೆ ಎಂದು ತಹಶೀಲ್ದಾರ ಅರಮನೆ ಸುಧಾ ಅವರು ತಿಳಿಸಿದ್ದಾರೆ. ಮುಂಗಾರು ಮಳೆ ಆರಂಭವಾಗಿ ಮೂರು ತಿಂಗಳು ಕಳೆದು ಹೋಗಿದೆ. ಒಂದು ಭಾರಿಯು ಹಳ್ಳ ಹರಿದು ಬಂದಿಲ್ಲ, ಆದರೆ ನಿನ್ನೆ ಸುರಿದ ಉತ್ತಮ ಮಳೆಯಿಂದ ಹಿರೇ ಹಳ್ಳ ಹರಿದು ಬಂದಿದೆ. ಅಲ್ಪ ಸ್ವಲ್ಪ ನೀರು ಇರುವ ಮಾರಲದಿನ್ನಿ ಡ್ಯಾಂನಲ್ಲಿ ಹಳ್ಳದ ನೀರು ಹರಿದು ಬರುತ್ತಿದೆ. ಮಸ್ಕಿ ನಾಲಾ ಯೋಜನೆ ತಟದಲ್ಲಿನ ರೈತರಿಗೆ ಭತ್ತ ನಾಟಿ ಮಾಡಲು ಅನುಕೂಲವಾಗಲಿದೆ.
