
ಉದಯವಾಹಿನಿ,ಕೋಲಾರ: ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಹಿಂದೆ ಇದ್ದ ಮದರ್ ಥೆರೆಸಾ ಕಾನ್ವೆಂಟ್ ಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಗ್ರಾಮದ ಮಾರ್ಕೊಂಡೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರಿ ಅಂದಿನ ಶಾಲೆಯ ಮುಖ್ಯಸ್ಥ ರವಿ ಹಾಗೂ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು ನಂತರ ಶಾಲಾ ದಿನಗಳಲ್ಲಿನ ಸಂಭ್ರಮ, ಅಭ್ಯಾಸ, ಆಟೋಟ, ಇತರೆ ವಿಷಯಗಳನ್ನೆಲ್ಲಾ ನೆನಪಿಸಿಕೊಂಡು ಪುಳಕಿತರಾದರು ಸುಮಾರು 35 ವರ್ಷಗಳ ಹಿಂದೆ ಇದ್ದ ಶಾಲೆಯ ಹಳೇ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ, ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಪ್ರಸ್ತುತ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆಯ ಕುರಿತು ಹಳೆ ವಿದ್ಯಾರ್ಥಿಗಳು ವಿಚಾರ ಹಂಚಿಕೊಂಡು ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ ಹಳೆ ವಿಧ್ಯಾರ್ಥಿಗಳ ಪರವಾಗಿ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಪರಮೇಶ್, ಉದ್ಯಮಿ ವೆಂಕಟರಮಣಗೌಡ, ಕನ್ವೀನರ್ ವೇಣುಗೋಪಾಲ್, ಬಿ.ಆರ್ ವೆಂಕಟೇಶ್, ವಕ್ಕಲೇರಿ ಲೋಕೇಶ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ಟ್ರಾವೆಲರ್ಸ್ ಮೋಹನ್, ಪೂರ್ಣಿಮಾ, ಪದ್ಮ, ಕಿರಣ್, ಬಿ.ಸಿ ಮಂಜುನಾಥ್, ವಿನುತ, ಮೋಹನ್, ಮಂಜು, ಚೇತನಾ, ಮಮತಾ, ರಾಘವೇಂದ್ರ, ಮಹೇಶ್, ಮುನಿರಾಜು, ಅಮರ್, ಶಂಕರ್, ಹಿದಾಯತ್, ಇಮ್ರಾನ್, ಮಧು, ಸೌಮ್ಯ, ಶೋಭ,ಮಾರ್ಕಂಡೇಯ, ಮುನೀಶ್, ನೆರ್ನಹಳ್ಳಿ ರವಿ ಮುಂತಾದವರು ಇದ್ದರು
