ಉದಯವಾಹಿನಿ,ಬೆಂಗಳೂರು: ಕರ್ನಾಟಕ ರಾಜ್ಯ ಮಟ್ಟದ ಗಾಯನ ಮತ್ತು ನೃತ್ಯ ಸ್ಪರ್ಧೆಯನ್ನು ನೆನ್ನೆ ಎಂವಿಆರ್ ಇವೆಂಟ್ಸ್ ರವರು ನ್ಯಾಷನಲ್ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ನ್ಯಾಷನಲ್ ಕಾಲೇಜು ಬಸವನಗುಡಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಗಾಯಕರಿಗೆ ಬಸವನಗುಡಿ ಕ್ಷೇತ್ರದ ಶಾಸಕರಾದ ಶ್ರೀ ರವಿಸುಬ್ರಮಣ್ಯರವರು ಹಾಗೂ ಗಿರಿನಗರ ವಾರ್ಡ್ ನ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀಮತಿ ನಂದಿನಿ ವಿಜಯ ವಿಠಲ್ ರವರು ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀ ಶ್ರೀಧರ್ ಅಯ್ಯರ್ ರವರು ಟ್ರೋಫಿಗಳನ್ನು ನೀಡಿದರು.ಈ ಸಂದರ್ಭದಲ್ಲಿ ಚಲನಚಿತ್ರ ನೃತ್ಯ ನಿರ್ದೇಶಕರುಗಳಾದ ಶ್ರೀ ಎಂ.ಕೆ ಶ್ರೀನಿವಾಸ್ ರವರು, ಕಂಬಿ ರಾಜುರವರು ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಶ್ರೀ ರಾಮುರವರು,ಕೆಇಬಿ ಕುಮಾರ್ ರವರು, ಗಾಯಕಿ ಅನುಶ್ರೀ ರವರು ಹಾಗೂ ಕಾರ್ಯಕ್ರಮದ ಆಯೋಜಕರು ಮತ್ತು ಗಿರಿನಗರ ವಾರ್ಡ್ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಅಜಿತ್ ಕುಮಾರ್ ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!