ಉದಯವಾಹಿನಿ,ಮುದ್ದೇಬಿಹಾಳ ; ಪ್ರತಿ ದಿನದ ಸುದ್ದಿಯನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ಪತ್ರಿಕಾ ವಿತರಕರು ನಿರ್ವಹಿಸುತ್ತಿದ್ದಾರೆ ಎಂದು ತಾಪಂ ಪ್ರಭಾರಿ ಇಒ ಯುವರಾಜ ಹನಗಂಡಿ ಹೇಳಿದರು ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ಪತ್ರಕರ್ತರ ಬಳಗದಿಂದ ಏರ್ಪಡಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಸರಿಯಾದ ಸಮಯಕ್ಕೆ ಸುದ್ದಿಯನ್ನು ವಿತರಕರು ತಲುಪಿಸದಿದ್ದರೆ ಸುದ್ದಿ ರದ್ದಿಯಾಗುತ್ತದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಪತ್ರಕರ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶಿಲ್ದಾರ ಸಿ ಎ ಗುಡದಿನ್ನಿ ಮಾತಿನಾಡಿ ಪ್ರಸ್ತುತ ಸುದ್ದಿಯನ್ನು ಜನತೆಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ ಎಂದರುಕಾನಿಪ ರಾಜ್ಯಕಾರ್ಯಕಾರಣಿ ಸದಸ್ಯ ಡಿ ಬಿ ವಡವಡಗಿ ಮಾತನಾಡಿ ಪತ್ರಿಕಾ ವಿತರಕರು ಪತ್ರಕರ್ತರ ಜೀವಾಳವಾಳ ಮಾತ್ರವಲ್ಲ ಆದಾರಸ್ತಂಭವಾಗಿದ್ದಾರೆ ನಸುಕಿನ ಜಾವದಲ್ಲಿ ಪತ್ರಿಕೆಗಳನ್ನು ಸಂಗ್ರಹಿಸಿ ಪ್ರತಿ ಮನೆ ಕಚೇರಿಗಳಿಗೆ ತಲುಪಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ, ಇಲೆಕ್ಟ್ರಾನಿಕ್ ಮಿಡಿಯಾದ ಮಧ್ಯೆಯೂ ಪ್ರಿಂಟ್ ಮಿಡಿಯಾ ತನ್ನದೆಯಾದ ಓದುಗರನ್ನು ಹೊಂದಿದೆ ಎಂದರು. ಕಾನಿಪ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಶಂಕರ ಹೆಬ್ಬಾಳ ಸರಕಾರ ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಉಚಿತ ಆರೋಗ್ಯ ವಿಮೆ, ಉಚಿತ ಬಸ್ ಪಾಸ್ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಒದಗಿಸಬೇಕು ಪ್ರಸ್ತುತ ಸರಕಾರ ಅನೇಕ ಭಾಗ್ಯಗಳನ್ನು ನೀಡಿದಂತೆ ಪತ್ರಕರ್ತರಿಗೆ ಮತ್ತು ವಿತರಕರಿಗೆ ಉಚಿತ ಬಸ್ ಒದಗಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಮತ್ತು ಕಿರಿಯ ಪತ್ರಿಕಾ ವಿತರಕರಿಗೆ ಮುದ್ದೇಬಿಹಾಳ ಪತ್ರಿಕಾ ಬಳಗದಿಂದ ಸನ್ಮಾನಿಸಿ ಸಿಹಿಯನ್ನು ನೀಡಲಾಯಿತು. ಈ ವೇಳೆ ಕಾನಿಪ ತಾಲೂಕ ಅಧ್ಯಕ್ಷ ಮುತ್ತು ವಡವಡಗಿ, ಉಪಾಧ್ಯಕ್ಷ ಸಿದ್ದು ಚಲವಾದಿ, ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ ,ಕಾನಿಪ ಧ್ವನಿ ಸಂಘದ ಉಪಾಧ್ಯಕ್ಷ ಅನಿಲ್ ತೇಲಂಗಿ, ಕಾರ್ಯದರ್ಶಿ ಗುಲಾಮ್ ಮಹಮ್ಮದ್ ದಪೇದಾರ ಹಾಗೂ ಪತ್ರಕರ್ತರಾದ ಅಮಿನಸಾ ಮುಲ್ಲಾ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಲಾಡ್ಲೇಮಶ್ಯಾಕ್ ನಧಾಪ ,ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ತಾಪಂ ಸಿಬ್ಬಂದಿ ಆನಂದ ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಪತ್ರಿಕೆಗಳನ್ನು ಕೊಂಡು ಓದುಗರ ಸಂಖ್ಯೆ ಹೆಚ್ಚಾಗಬೇಕಿದೆ ಮತ್ತು ಪತ್ರಿಕೆಗಳನ್ನು ಹಾಕಿಸಿಕೂಳ್ಳುವ ಗ್ರಾಹಕರು ಪ್ರತಿ ತಿಂಗಳು ಪ್ರತಿಕೆಯ ಬಿಲ್ ನ್ನು ಸಕಾಲದಲ್ಲಿ ಒದಗಿಸಿದರೆ ಪತ್ರಿಕಾ ವಿತರಕರಿಗೆ ಸರಿಯಾದ ಸಮಯಕ್ಕೆ ಸಂಬಳ ಮಾಡಲು ಸಾಧ್ಯವಾಗುತ್ತದೆ ಪತ್ರಿಕಾ ವಿತರಣೆಯಿಂದ ಅವರ ಕುಟುಂಬ ಸಾಗಿಸುವ ಅವರಿಗೆ ಅಲೆದಾಡಿಸುವ ಬದಲು ಸಕಲಾಕ್ಕೆ ಪತ್ರಿಕೆಯ ಬಿಲ್ ಒದಗಿಸಬೇಕು; ಡಿ ಬಿ ವಡವಡಗಿ ಪತ್ರಕರ್ತರು.

Leave a Reply

Your email address will not be published. Required fields are marked *

error: Content is protected !!