ಉದಯವಾಹಿನಿ,ಕೋಲಾರ : ಇಂಡಿಯನ್ ಯೂನಿಯನ್ ಮುಸ್ಲೀಮ್ ಲೀಗ್ ಐ.ಯು.ಎಂ.ಎಲ್ ಕೆ.ಎಂ.ಸಿ.ಸಿ ವತಿಯಿಂದ ಉಚಿತ ಸಾಮೂಹಿಕ ವಾರ್ಷಿಕ ವಿವಾಹ ಸಮಾರಂಭವನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.
ಎಲ್ಲಾ ಸಮುದಾಯದ ೧೮ ವರ್ಷ ತುಂಬಿರುವ ಹೆಣ್ಣು ಹಾಗೂ ೨೧ ವರ್ಷದ ಗಂಡು ಮಕ್ಕಳು ಮದುವೆಯಾಗಲು ಬಯಸಿದ್ದಲ್ಲಿ ದಿನಾಂಕ ಸೆ, ೨೦ರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ನೊಂದಣಿ ಸಂದರ್ಭದಲ್ಲಿ ಹೆಣ್ಣಿನ ಪೂರ್ಣಭಾವಚಿತ್ರ ೧, ಪಾಸ್‌ಪೋಟ್ ಸೈಜ್ ೫, ಲಗ್ನಪತ್ರಿಕೆ, ಆಧಾರ್‌ಕಾರ್ಡ್, ಅಥವಾ ಮತದಾರರ ಗುರುತಿನ ಚೀಟಿ, ತಂದೆ ತಾಯಿಯ ಆಧಾರ್ ಕಾರ್ಡ್ ಮತ್ತು ಭಾವಿಚಿತ್ರ, ಗಂಡಿನ ಪೂರ್ಣಭಾವಚಿತ್ರ ೧, ಪಾಸ್‌ಪೋಟ್ ಸೈಜ್ ೫, ಲಗ್ನಪತ್ರಿಕೆ, ಆಧಾರ್‌ಕಾರ್ಡ್, ಅಥವಾ ಮತದಾರರ ಗುರುತಿನ ಚೀಟಿ, ತಂದೆ ತಾಯಿಯ ಆಧಾರ್ ಕಾರ್ಡ್ ಮತ್ತು ಭಾವಿಚಿತ್ರಗಳನ್ನು ನೀಡಿ ಪಕ್ಷದ ರಾಜ್ಯ ಉಪಾಧ್ಯಕ್ಷ ಶೇಕ್ ಅಶ್ರಫ್‌ಅಲಿ ೯೯೭೨೬೩೬೬೬೦, ಜಿಲ್ಲಾ ಕಾರ್ಯದರ್ಶಿ ಸೈಯದ್ ಸಿಬ್ಗತ್ ಉಲ್ಲಾ ೭೮೯೨೩೬೯೨೫೩ ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ.
ಇಂಡಿಯನ್ ಯೂನಿಯನ್ ಮುಸ್ಲೀಮ್ ಲೀಗ್ ಸದಸ್ಯತ್ವ ಪ್ರಕ್ರಿಯೆಗಳು ಆನ್‌ಲೈನ್ ಪ್ರಾರಂಭವಾಗಿದ್ದು, ಸದಸ್ಯತ್ವವನ್ನು ಆನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!