ಉದಯವಾಹಿನಿ,ಚಿಂಚೋಳಿ:ಅಜ್ಞಾನದ ಕತ್ತಲೆಯಿಂದ ಸುಜ್ಞಾನವೆಂಬ ಬೆಳಕಿನ ಕಡೆಗೆ ಸಮಾಜವನ್ನು ಕೊಂಡ್ಯೂಯುವ ಜವಾಬ್ದಾರಿ ಶಿಕ್ಷಕರದ್ದು ಆಗಿದೆ ಎಂದು ನಿಡಗುಂದಾ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಾ.ಬಿ.ಆರ್.ತಳವಾರ ಹೇಳಿದರು.ತಾಲ್ಲೂಕಿನ ನಾಗಾಯಿದ್ಲಾಯಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಸರ್ವಪಲ್ಲಿ ರಾಧಾಕೃಷ್ಣನ್ ರವರು 1888 ಸೆ.05ರಂದ್ದು ಚಿತ್ತೂರ ಜಿಲ್ಲೆಯಲ್ಲಿ ಜನಿಸಿ ಬಾಲ್ಯದಿಂದಲೂ ಯವ್ವನದ ಒಡನಾಡಿಗಳು ಉತ್ತಮ ಸಂಸ್ಕಾರ ಜೋತೆಗೆ ಗುಣಮಟ್ಟದ ಶಿಕ್ಷಣ ದೊರೆತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಡಾಕ್ಟರೇಟ್ ಪದವಿ ಗಳಿಸಿದ್ದರು ನನ್ನ ಜನ್ಮದಿನ ಆಚರಣೆ ಮಾಡುವ ಬದಲು ಶಿಕ್ಷಕರ ದಿನಾಚರಣೆ ಮಾಡುವಂತೆ ಸರ್ವಪಲ್ಲಿ ರಾಧಾಕೃಷ್ಣ ನ್ ಹೇಳಿದರು.ಶಿಕ್ಷಕರು ನೀಡುತ್ತಿರುವ ಶಿಕ್ಷಣದಿಂದಲ್ಲೆ ಇಂದು ದೇಶವನ್ನು ಏತ್ತರ ಮಟ್ಟಕ್ಕೆ ಬೆಳೆಯುತ್ತಿದೆ,ಜೀವನದಲ್ಲಿ ಪೋಷಕರ ಸ್ಥಾನವನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ,ಪೋಷಕರು ನಮಗೆ ಸುಂದರ ಜಗತ್ತಿಗೆ ತಂದವರು ಹೀಗಾಗಿ ನಮಗೆ ಪೋಷಕರು ಮೊದಲು ಗುರುವಾದರೆ ಶಿಕ್ಷಕರು ಎರಡನೇ ಗುರು ಆಗಿದ್ದಾರೆ ಎಂದರು.ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ,ಅಧ್ಯಕ್ಷತೆ ವಹಿಸಿದ ಸುನೀಲ ಹಳ್ಳಿ ಮಾತನಾಡಿದ್ದರು.ಹತ್ತನೇ ತರಗತಿಯ ವಿಧ್ಯಾರ್ಥಿನಿಗಳಾದ ಶಿವಾನಿ ಸ್ವಾಗತಿಸಿದರು,ಈರಮ್ಮ ನಿರೂಪಿಸಿದರು,ಮುತ್ತಾಹರ್ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳು ನೇಮರಾಜ ಹವಳೆ,ಬೋರಪ್ಪಾ ನಾಯಕ,ಮಹೇಬೂಬ ಪಟೇಲ,ಜಗದೇವ ಗೌತಮ್,ಸುಷ್ಮೀತಾ ಮಾಳದಕರ,ನಾಗರತ್ನ ಚಿಮ್ಮನಚೋಡ,ಕಸ್ತೂರಿಬಾಯಿ,ವೈಶಾಲಿದೇವಿ,ಸಂಜುಕುಮಾರ,ವಾಹೀದಬೇಗಂ,ಅನೇಕ ವಿಧ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!