ಉದಯವಾಹಿನಿ, : ಮಧ್ಯ ಪ್ರಾಚ್ಯದ ಯಾವುದೇ ಬೀದಿ ಬದಿಯ ಆಹಾರಗಳಲ್ಲಿ ಲ್ಯಾಂಬ್ ಅಥವಾ ಚಿಕನ್ ಶವರ್ಮಾ ಅತ್ಯಂತ ಜನಪ್ರಿಯ ಆಹಾರವಾಗಿದೆ. ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸಾಸ್‌ಗಳು, ತರಕಾರಿಗಳು, ಉಪ್ಪಿನಕಾಯಿಯೊಂದಿಗೆ ಮುಳುಗಿಸುವುದಾಗಿದೆ. ಇದನ್ನು ಸಲಾಡ್ ಅಥವಾ ಫ್ರೆಂಚ್ ಫ್ರೈಸ್‌ನೊಂದಿಗೆ ಸರ್ವ್ ಮಾಡಬಹುದು. ಚಿಕನ್ ಶವರ್ಮಾವನ್ನು ಮಧ್ಯಾಹ್ನದೂಟಕ್ಕೂ ಬಳಸಿಕೊಳ್ಳಬಹುದು. ಇನ್ನು ವಾರಾಂತ್ಯಕ್ಕೆ ಮನೆಯ ಸದಸ್ಯರೆಲ್ಲಾ ಮನೆಯಲ್ಲಿದ್ದಾಗ ಕೂಡ ಇದನ್ನು ತಯಾರಿಸಬಹುದು.
ಚಿಕನ್ ಶವರ್ಮಾ
ಚಿಕನ್ ಸ್ಕಿನ್ ಅನ್ನು ಮೂಳೆರಹಿತ ಮೀಟ್‌ನೊಂದಿಗೆ ಮ್ಯಾರಿನೇಟ್ ಮಾಡಿಕೊಂಡು ತಯಾರಿಸಬಹುದಾಗಿದ್ದು ಜ್ಯೂಸಿಯಾಗಿ ರುಚಿಕರವಾಗಿ ಇದನ್ನು ತಯಾರಿಸಬಹುದು. ಏಷ್ಯಾ, ಉತ್ತರ ಆಫ್ರಿಕಾ ಹಾಗೂ ಮೆಡಿಟರೇನಿಯನ್ ಸ್ಥಳಗಳಾದ್ಯಂತ ಇದನ್ನು ಸರ್ವ್ ಮಾಡಲಾಗುತ್ತದೆ. ಚಿಕನ್ ಶವರ್ಮಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದೊರೆಯುತ್ತದೆ. ಚಿಕನ್ ಅನ್ನು ಮ್ಯಾರಿನೇಟ್ ಮಾಡಲು ಪಾಪ್ರಿಕಾ, ಅರಶಿನ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಬಹ್ರಾತ್ ಹೆಸರಿನ ಮಸಾಲೆಯನ್ನು ಬಳಸಬಹುದು.

ಚಿಕನ್ ಶವರ್ಮಾ ಸಿದ್ಧವಾದ ಬಳಿಕ ಅದನ್ನು ಬಡಿಸಲು ಹಲವಾರು ವಿಧಾನಗಳಿವೆ. ಇದನ್ನು ಸ್ಯಾಂಡ್‌ವಿಚ್, ಪೀಟಾ ಬ್ರೆಡ್, ಫ್ಲ್ಯಾಟ್‌ಬ್ರೆಡ್‌ನೊಂದಿಗೆ ವ್ರ್ಯಾಪ್ ಮಾಡಿ ಸೇವಿಸಬಹುದು. ಶವರ್ಮಾವನ್ನು ತೇವಾಂಶವಾಗಿರಿಸಲು ಕೆಲವು ಸಾಸ್‌ಗಳನ್ನು ಸೇರಿಸಬಹುದು. ಯೋಗರ್ಟ್ ಆಧಾರಿತ ಸಾಸ್‌ಗಳು ಮೆಡಿಟರೇನಿಯನ್ ಹಾಗೂ ಮಧ್ಯ ಪ್ರಾಚ್ಯದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.
ಚಿಕನ್ ಬ್ರೆಸ್ಟ್ ಅಥವಾ ಥೈ ಅನ್ನು 1 ½ ಇಂಚಿನಷ್ಟು ಕಟ್ ಮಾಡಿ ಡ್ರೈ ಮಾಡಿಕೊಳ್ಳಿ.
ಮ್ಯಾರಿನೇಟ್ ಮಾಡಲು ಈ ಕೆಳಗಿನ ವಸ್ತುಗಳನ್ನು ಬಳಸಿ
ಎಕ್ಸ್ಟ್ರಾ ವರ್ಜಿನ್ ಆಯಿಲ್ – 1 ½ ಚಮಚ
ಬೆಳ್ಳುಳ್ಳಿ – 1 ಚಮಚ
ಪಾಪ್ರಿಕಾ ಅಥವಾ ಮೆಣಸಿನ ಹುಡಿ – ½ ದಿಂದ ¾ ಚಮಚ
ಜೀರಿಗೆ ಹುಡಿ – 1 ಚಮಚ
ಹುಡಿ ಮಾಡಿದ ಕೊತ್ತಂಬರಿ – 1 ಚಮಚ
ಏಲಕ್ಕಿ – 1/3 ರಿಂದ ½ ಚಮಚ
ದಾಲ್ಚಿನ್ನಿ ಹುಡಿ – ¼ ಚಮಚ
ಹುಡಿ ಮಾಡಿದ ಕಾಳುಮೆಣಸು – ¼ ರಿಂದ ½ ಚಮಚ
ಅರಿಶಿನ – 1/8 ಚಮಚ
ಉಪ್ಪು – ½ ಚಮಚ
ಗ್ರೀಕ್ ಯೋಗರ್ಟ್ – 2 ಚಮಚ
ಲಿಂಬೆ ರಸ – 1 ½ ಚಮಚ

Leave a Reply

Your email address will not be published. Required fields are marked *

error: Content is protected !!