
ಉದಯವಾಹಿನಿ ದೇವದುರ್ಗ: ತಾಲೂಕ ಪಂಚಾಯಿತಿ ಕಾರ್ಯಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘಟನೆಯ ತಾಲೂಕ ಸಮಿತಿ ನೇತೃತ್ವದಲ್ಲಿ ಹದಿನೈದು ಪಂಚಾಯಿತಿ ಸಮಸ್ಯೆಗಳ ಸಂಭಂದಿಸಿದಂತೆ ವಿವಿಧ ಬೇಡಿಕೆಗಳ ಹೀಡೆರಿಕೆಗಾಗಿ ಇಂದು ಪ್ರತಿಭಟನೆ ಅಮ್ಮಿಕೊಳ್ಳಲಾಗಿತ್ತು.ಬುಧುವಾರ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಸಂಘಟನೆಯ ಮುಖಂಡರ ಜೊತೆ ಸಭೆ ಜರುಗಿತು. ಜಿಲ್ಲಾ ಮಟ್ಟದ ಅಧಿಕಾರಿ ಮಾತನಾಡಿ ಸಮಸ್ಯೆಗಳ ಸಂಭಂದಿಸಿದಂತೆ ಎಲ್ಲಾ ಪಂ ಅಭಿವೃದ್ಧಿ ಅಧಿಕಾರಿಗಳಿಗೆ ತರಾಟಗೆ ತೆಗೆದುಕೊಂಡರು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಎಚ್ಚರಿಕೆ ನೀಡಿದರು, ಸಂಘಟನೆ ಮುಖಂಡರ ಜೊತೆ ಮಾತನಾಡಿ ಎಲ್ಲಾ ಗ್ರಾಮ ಪಂಚಾಯಿತಿ ಸಮಸ್ಯೆಗಳನ್ನ ಸಿಘ್ರದಲ್ಲಿ ಪರಿಹರಿಸಲಾಗುವುದು,ಎಂದು ಲಿಖಿತ ಭರವಸೆ ನೀಡಿ ಹೋರಾಟ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರು, ಭಾಗವಾಗಿ ಹೋರಾಟವನ್ನ ಹಿಂಪಡೆಯಲಾಯಿತು ಎಂದು ತಾಲೂಕ ಕಾರ್ಯದರ್ಶಿ ಮೌನೇಶ ಜಾಲಹಳ್ಳಿ ಪತ್ರಿಕೆಗೆ ತಿಳಿಸಿದರು.ತಾಲೂಕ ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗರೆಡ್ಡಿ, ಸಹಾಯಕ ನಿರ್ದೇಶಕರಾದ ಅಣ್ಣರಾವ್, ಮಾತನಾಡಿದರು.ಸಂಘಟನೆಯ ಜಿಲ್ಲಾ ಮುಖಂಡರಾದ ನರಸಣ್ಣ ನಾಯಕ ,ಶಬ್ಬೀರ, ತಾಲೂಕ ಅದ್ಯಕ್ಷರಾದ ಹನುಮಂತ ಗುರಿಕಾರ,ಸೇರಿದಂತೆ ಎಲ್ಲಾ ಘಟಕದ ಮುಖಂಡರು ಭಾಗವಹಿಸಿದ್ದರು
