ಉದಯವಾಹಿನಿ ಶಿಡ್ಲಘಟ್ಟ: ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾದವ ಕುಲಭಾಂದವರು ವಿಜೃಂಬಣೆಯಿಂದ ನಡೆಸುತ್ತಿದ್ದು, ಸಮಸ್ತ ನಾಗರೀಕರಿಗೆ ಒಳ್ಳೆಯದಾಗಲಿ ಎಂದು ಶಾಸಕ  ರವಿಕುಮಾರ್ ತಿಳಿಸಿದರು.ನಗರದ ಟಿ.ಬಿ ರಸ್ತೆಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶ್ರೀ ಕೃಷ್ಣ ಜಗತ್ತನ್ನು ಉಳಿಸಲು ಅವತಾರವೆತ್ತಿದ್ದು, ಅವರ ಕುಲಭಾಂದವರು ಜಯಂತಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ನಡೆಸುತ್ತಿದ್ದು, ತಾಲ್ಲೂಕಿನ ಎಲ್ಲಾ ಜನತೆಗೂ ಒಳ್ಳೆಯದಾಗಲಿ, ರೈತರಿಗೆ ಉತ್ತಮ ಮಳೆಯಾಗಿ ಬೆಳೆಯಾಗಲಿ ರೈತರು ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ತಿಳಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಿಂದೂ ಸಂಪ್ರದಾಯದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತಿದ್ದು, ನಾಡಿನ ಸಮಸ್ತ ಜನತೆಗೆ ಒಳ್ಳೆಯದಾಗಲಿ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.ನಂತರ ಕಲಾತಂಡಗಳೊಂದಿಗೆ ಡೋಲು ಬಾರಿಸಿದ ಸಂಸದ ಮುನಿಸ್ವಾಮಿ, ನೆರೆದಿದ್ದಂತಹ ಭಕ್ತರಿಗೆ ಮನರಂಜನೆಯೂ ನೀಡಿದರು.ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಪರಮಾತ್ಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ತಾಲ್ಲೂಕಿನ ಯಾದವ ಕುಲ ಭಾಂದವರು ಹಳ್ಳಿಗಳಿಂದ ಶ್ರೀ ಕೃಷ್ಣ ಮೂರ್ತಿ ಹೊತ್ತ ಮುತ್ತಿನ ಪಲ್ಲಕಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು, ಕಾರ್ಯಕ್ರಮದಲ್ಲಿ ವಿವಿದ ಕಲಾತಂಡಗಳು ಆಗಮಿಸಿದ್ದು, ಸ್ಥಬ್ಧ ಚಿತ್ರಗಳು ನೋಡುಗರಿಗೆ ಆಕರ್ಷಣೀಯವಾಗಿತ್ತು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶ್ರೀ ಕೃಷ್ಣ ರುಕ್ಮಿಣಿ ವೇಶ ದರಿಸಿದ್ದು ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾಗಿದ್ದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ಸೀಕಲ್ ರಾಮಚಂದ್ರಗೌಡ, ಆಂಜಿನಪ್ಪ ಪುಟ್ಟು, ರಾಜೀವ್ ಗೌಡ, ತಾಲ್ಲೂಕಿನ ಎಲ್ಲಾ ಕುಲಭಾಂದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!