ಉದಯವಾಹಿನಿ, ನಾಗ್ಪುರ: ದೇಶದಲ್ಲಿ ಎಲ್ಲಿಯ ತನಕ ಅಸಮಾನತೆ, ಸಾಮಾಜಿಕ ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಅಸಮಾನತೆ, ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಮನುಷ್ಯರನ್ನು ನಾವು ಹಿಂದೆ ತಳ್ಳಿದ್ದೇವೆ. ಅವರ ಬಗ್ಗೆ ಕಾಳಜಿ ವಹಿಸಲಿಲ್ಲ, ಇದು ೨೦೦೦ ವರ್ಷಗಳಿಂದಲೂ ಮುಂದುವರಿದಿದೆ. ಸಮಾನತೆ ಸಿಗುವ ತನಕ ಮೀಸಲಾತಿ ಮುಂದುವರಿಯಬೇಕು ಎಂದಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಮರಾಠ ಸಮುದಾಯದ ಆಂದೋಲನ ಮತ್ತೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಭಾಗವತ್ ಅವರಿಂದ ಮೀಸಲಾತಿ ಕುರಿತು ಹೇಳಿಕೆ ಹೊರ ಬಿದ್ದಿದೆ. ಸಮಾನತೆ ಒದಗಿಸುವವರೆಗೆ, ಕೆಲವು ವಿಶೇಷ ಪರಿಹಾರ ಮುಂದುವರಿಯಬೇಕು ಅದರಲ್ಲಿ ಮೀಸಲಾತಿಯೂ ಒಂದು ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯಬೇಕು ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ಆರ್ ಎಸ್ ಎಸ್ ಎಲ್ಲಾ ಬೆಂಬಲ ನೀಡಲಿದೆ ಎಂದಿದ್ದಾರೆ.

ಇತ್ತೀಚೆಗೆ ಸಮಾಜದಲ್ಲಿ ಎಲ್ಲಿ ನೋಡಿದರೂ ತಾರತಮ್ಯವಿದೆ,ಅಂತಹ ತಾರತಮ್ಯ ದೂರವಾಗಬೇಕು, ಮೀಸಲಾತಿಗಳು “ಗೌರವವನ್ನು ನೀಡುವುದು” ಮತ್ತು ಕೇವಲ ಆರ್ಥಿಕ ಅಥವಾ ರಾಜಕೀಯ ಸಮಾನತೆಯನ್ನು ಖಾತ್ರಿಪಡಿಸುವುದರ ಬಗ್ಗೆ ಅಲ್ಲ. ಅಸಮಾನತೆ ದೂರ ಮಾಡಲು ಸಹಕಾರಿಯಾಗಲಿದೆ ಎಂದಿದ್ಧಾರೆ. ಅಖಂದ ಭಾರತಕ್ಕೆ ಶ್ರಮಿಸಿ ಅಖಂಡ ಭಾರತ’ ಯಾವಾಗ ಅಸ್ತಿತ್ವಕ್ಕೆ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅದಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ, ವಯಸ್ಸಾಗುವ ಮೊದಲು ಕಾರ್ಯರೂಪಕ್ಕೆ ಬರುವುದನ್ನು ನೋಡುತ್ತೀರಿ ಎಂದು ಹೇಳಿದ್ದಾರೆ. ಇಂದಿನ ಯುವಕರು ವೃದ್ಧರಾಗುವ ಮೊದಲು ‘ಅಖಂಡ ಭಾರತ’ ಅಥವಾ ಅವಿಭಜಿತ ಭಾರತ ಕನಸು ನಿಜವಾಗಲಿದೆ. ೧೯೪೭ ರಲ್ಲಿ ಭಾರತದಿಂದ ಬೇರ್ಪಟ್ಟವರು ಈಗ ತಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿದ್ದಾರೆ.ಅವರೆಲ್ಲಾ ಭಾರತದ ಭಾಗವಾಗಲು ಸಹಕಾರಿಯಾಗಲಿದೆ ಎಂದಿದ್ದಾರೆ. ಸ್ವಾತಂತ್ರ್ಯ ಬಂದಾಗ ಭಾರತದಿಂದ ಬೇರ್ಪಟ್ಟವರು ತಪ್ಪು ಮಾಡಿದ್ದೇವೆ ಎಂದು ಭಾವಿಸುವ ಪರಿಸ್ಥಿತಿ ಬಂದಿದೆ. ಆಗುತ್ತಿವೆ ‘ನಾವು ಮತ್ತೆ ಭಾರತವಾಗಬೇಕು ಎಂದು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!