ಉದಯವಾಹಿನಿ ದೇವದುರ್ಗ:- ತಾಲೂಕಿನ ಇರಬಗೇರಾ ಪಂಚಾಯತ್ ವ್ಯಾಪ್ತಿಯ ಇಳಿಗೇರಾದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಹಲವಾರು ವಿಧ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಗಳಿಸುವ ಮೂಲಕ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಏರಿಸಿಕೊಂಡ ವಿದ್ಯಾರ್ಥಿಗಳನ್ನು ಶಾಲೆಯ ಸುಧಾರಣೆ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಂಗಮ್ಮ ಹಾಗೂ ಸರ್ವ ಸದಸ್ಯರು ಮತ್ತು ಶಾಲೆಯ ಮಖ್ಯ ಶಿಕ್ಷಕಿ ಕವಿತಾ ಆರ್ ಸೇರಿದಂತೆ ಎಲ್ಲಾರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ,
