
ಉದಯವಾಹಿನಿ ಸಿಂಧನೂರು: ಕಲ್ಯಾಣ ಉತ್ಸವ ದಿನಾಚರಣೆ ಕುರಿತು ತಾಲ್ಲೂಕಿನಲ್ಲಿ ಪ್ರತಿಯೊಂದು ಇಲಾಖೆಯ ತಮ್ಮ ತಮ್ಮ ಕಛೇರಿ ಮೇಲೆ ರಾಷ್ಟ್ರೀಯ ಧ್ವಜವನ್ನು ಧ್ವಜಾರೋಹಣ ನೆರವೇರಿಸಿಬೇಕು ತಾಲ್ಲೂಕು ತಹಶೀಲ್ದಾರ್ ಅರುಣ್ ಎಚ್ ದೇಸಾಯಿ ತಿಳಿಸಿದರು.ತಾಲ್ಲೂಕು ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು ತಾಲ್ಲೂಕು ದಂಡಾಧಿಕಾರಿ ಅವರ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ಮತ್ತು ವಿಶ್ವಕರ್ಮ ಜಯಂತಿ ಎರಡು ಹೊಂದಿ ಸಲ ಬಂದಿದ್ದರಿಂದ ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ಬೆಳಿಗ್ಗೆ 9-00.ಗಂಟೆಗೆ ವಿಶ್ವಕರ್ಮ ಭಾವಚಿತ್ರಕ್ಕೆ ಎಲ್ಲಾ ಸಮುದಾಯಗಳ ಮುಖಂಡರು ಹಾಗೂ ಸಾಮಾಜದ ಬಂಧುಗಳು ಸೇರಿದಂತೆ ಇತರರು ಪುಷ್ಪಾರ್ಚನೆ ಸಲ್ಲಿಸುವ ಜೊತೆಗೆ ಧ್ವಜಾರೋಹಣ ನೆರವೇರಿಸಲಾಗುತ್ತದೆ ಎಂದು ಹೇಳಿದರು ಆದರಿಂದ ತಾಲ್ಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಧ್ವಜಾರೋಹಣ ಮಾಡಿಕೊಂಡು ತಾಲೂಕು ಕಛೇರಿಗೆ ಸಮಯ 9-30 ವರಿಗೆ ಎಲ್ಲರೂ ಅಧಿಕಾರಿಗಳು ಬರಬೇಕು ಮತ್ತು ತಾಲೂಕು ಆಡಳಿತ ಮಂಡಳಿ ವತಿಯಿಂದ ಶಾಸಕ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎರಡು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ಆಚರಣೆ ಮಾಡಬೇಕೆಂದು ಎಲ್ಲ ಅಧಿಕಾರಿಗಳಿಗೆ ತಾಲೂಕು ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರ ಸೂಚನೆ ನೀಡಿದರು.
