ಉದಯವಾಹಿನಿ ಸಿಂಧನೂರು: ರಾಯಚೂರು.ರೈತರು ಸೈನಿಕರು ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳೆಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.
ನಾಗವೇಣಿ ಹೇಳಿದರು ಸಿಂಧನೂರು ತಾಲೂಕಿನ ಜವಳಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ ಶಿಕ್ಷಕರ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಸಂವಿಧಾನ ಎಲ್ಲರಿಗೂ ಶಿಕ್ಷಣದ ಅವಕಾಶವನ್ನು ಒದಗಿಸಿದೆ ಆದರೆ ಈಗ ಸಂವಿಧಾನಕ್ಕೆ ಅಪಾಯ ಬಂದು ಒದಗಿದೆ ಆದ್ದರಿಂದ ಸವಿಧಾನವನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಸ್ವತಂತ್ರ ಬಂದು 76 ವರ್ಷವಾದರೂ ಶೇಕಡ ನೂರರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ ಡಾ. ನಾಗವೇಣಿ.

ಶಿಕ್ಷಣದಿಂದ ವಂಚಿತರಾದವರು ಅಸಾಮಾನ್ಯತೆಗೆ ಬೆಲೆಯಾಗುತ್ತಾರೆ ನಮ್ಮ ಸ್ವತಂತ್ರ ಹೋರಾಟಗಾರ ಕನಸು ನನಸಾಗಬೇಕಾದರೆ ಎಲ್ಲರಿಗೂ ವೈಜ್ಞಾನಿಕ ವೈಚಾರಿಕ ಶಿಕ್ಷಣ ದೊರಿತು ದೇಶ ಪ್ರಗತಿಪಥದಲ್ಲಿ ಮುನ್ನಡೆಯಬೇಕೆಂದು.

ಶಿಕ್ಷಕರ ದಿನಾಚರಣೆ ಅಂಗವಾಗಿ 16 ಜನ ಶಿಕ್ಷಕರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಿರಿ ಟ್ರಸ್ಟ್ ಅಧ್ಯಕ್ಷರಾದ ಪ್ರದೀಪ್ ಪೂಜಾರಿ ವಹಿಸಿದರು ವೇದಿಕೆ ಮೇಲೆ ಮುಖ್ಯ ಗುರುಗಳಾದ ಮಹದೇವಮ್ಮ, ಮಾನ್ಯ ಸಕರಾದ ಶರಣಪ್ಪ, ಮಹಿಳಾ ಮುಖಂಡರಾದ ಅನ್ನಪೂರ್ಣಮ್ಮ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Leave a Reply

Your email address will not be published. Required fields are marked *

error: Content is protected !!