ಉದಯವಾಹಿನಿ, ನವದೆಹಲಿ: ದೇಶದಲ್ಲಿ ಕಳೆದ ವರ್ಷ ಜೂನ್‍ನಲ್ಲಿ ಪೆಟ್ರೋಲ್‍ನೊಂದಿಗೆ ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣ ಗುರಿ ಸಾಧಿಸಿರುವ ಕೇಂದ್ರ ಸರ್ಕಾರ, 2025 ರ ವೇಳೆಗೆ ಶೇಕಡಾ 25 ಮಿಶ್ರಣ ಮಾಡುವ ಉದ್ದೇಶ ಹೊಂದಿದೆ.ಈ ನಿಟ್ಟಿನಲ್ಲಿ ಬಹುವ್ಯವಸ್ಥೆಯ ಕಡಿಮೆ ಇಂಗಾಲ ಶಕ್ತಿ ಮಾರ್ಗದ ಅಭಿವೃದ್ಧಿ ವೇಗಗೊಳಿಸಬಲ್ಲ ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ.ಒಕ್ಕೂಟ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಗಟ್ಟಿತನ ಸಾಬೀತು ಪಡಿಸಲು ಸಹಕಾರಿಯಾಗಲಿದೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಫ್ರೆಂಚ್ ಸಹವರ್ತಿ ಫ್ರಾಂಕೋಯಿಸ್ ಹೊಲಾಂಡ್ ಅವರು ಪ್ಯಾರಿಸ್ ನಲ್ಲಿ ಜಂಟಿಯಾಗಿ ಪ್ರಾರಂಭಿಸಿದ ಇಂಟನ್ರ್ಯಾಷನಲ್ ಸೌರ ಒಕ್ಕೂಟಕ್ಕೆ ಸಹಕಾರಿಯಾಗಿ ಕೆಲಸ ಮಾಡಲಿದೆ.ಜುಲೈನಲ್ಲಿ ಗೋವಾದಲ್ಲಿ ನಡೆದ ಜಿ-20 ಶೃಂಗಸಭೆಯ 14 ನೇ ಇಂಧನ ಪರಿವರ್ತನಾ ಸಚಿವರ ಸಭೆಯಲ್ಲಿಯೂ ಕೂಡ ಕೇಂದ್ರ ಸರ್ಕಾರ ಆರಂಭಿಸಲಿರುವ ಒಕ್ಕೂಟದೊಂದಿಗೆ ಪ್ರಾರಂಭಿಕ ಭಾರತದೊಂದಿಗೆ ನಿಲ್ಲಲು 19 ದೇಶಗಳು ಒಪ್ಪಿಕೊಂಡಿವೆ .ಇಟಲಿ, ಕೀನ್ಯಾ, ಯುಎಇ ಮತ್ತು ಬ್ರೆಜಿಲ್ – ಮುಂದಿನ ಜಿ20 ಅಧ್ಯಕ್ಷ ಮತ್ತು ವಿಶ್ವದ ಎರಡನೇ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ನೀತಿ, ತಂತ್ರಜ್ಞಾನ ಮತ್ತು ಅನುಷ್ಠಾನದಾದ್ಯಂತ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಅಗತ್ಯ ಒತ್ತಿ ಹೇಳಿವೆ ಎಂದು ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರಾನ್‍ಹೋಮ್ ಹೇಳಿದ್ದಾರೆ.”ಟೆಸ್ಟ್ ಟ್ಯೂಬ್‍ನಿಂದ ಟೆಸ್ಟ್ ಡ್ರೈವ್‍ಗೆ ಚಲಿಸುವ ಗುರಿಯೊಂದಿಗೆ ತಮ್ಮ ಜೈವಿಕ ಇಂಧನ ಪ್ರಯಾಣದಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿ ಮೈತ್ರಿಯ ಸ್ಥಾಪನೆ ಗುರಿ ಹೊಂದಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!