ಉದಯವಾಹಿನಿ, ಬೆಂಗಳೂರು: ಡೋಲು ವಿದ್ವಾನ್ ರಘು ಆರ್ ತುಮಕೂರಿನಲ್ಲಿ ಹುಟ್ಟಿದಿದ್ದಾದರೂ ಬೆಳೆದಿದ್ದು ಬೆಂಗಳೂರಿನಲ್ಲಿ. ರಘು ಕೂಡ ಡೋಲು ಶಿಕ್ಷಕರಾಗಿದ್ದು, ಇದುವರೆಗೆ ಕರ್ನಾಟಕದಾದ್ಯಂತ ೨೫ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ.
ಮೊದಲು ಅವರು ಟಿಟಿಡಿ, ತಿರುಪತಿಯಲ್ಲಿ ಆಸ್ಥಾನ ವಿದ್ವಾನ್ ಆಗಿ ತಮ್ಮ ಗುರು ಮಾಸ್ಟರ್ ಸಿ.ಎಂ ರಾಜಗೋಪಾಲ್, ಟಿಟಿಡಿ ಸಂಗೀತ ಕಾಲೇಜು ಉಪನ್ಯಾಸಕ ರಾಗಿದ್ದರು.ಡೋಲು ರಘು ಅರ್ ರವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲಿ ಅವುಗಳಲ್ಲಿ ಕೆಲವು ತ್ಯಾಗರಾಜ ಆರಾಧನಾ ಮಹೋತ್ಸವ, ತಿರುವಯ್ಯರ್, ತಮಿಳುನಾಡು, ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮೈಸೂರು ದಸರಾ ಉತ್ಸವ, ಅವದೂತ ದತ್ತಪೀಠ, ಮೈಸೂರು, ಗೋಲ್ಡನ್ ಟೆಂಪಲ್, ತಮಿಳುನಾಡು, ಯಶಸ್ವಿಯಾಗಿ ನಾದಸ್ವರದೊಂದಿಗೆ ಸುಶ್ರಾವ್ಯವಾಗಿ ಡೋಲು ಬಾರಿಸಿ ಯಶಸ್ವಿಯಾಗಿದ್ದಾರೆ.
ತಂದೆ ಸಿ ರಂಗನಾಥ್ ಸಹ ಹೆಸರಾಂತ ನಾದಸ್ವರ ವಿದ್ವಾನ್.ಡೋಲು ವಿದ್ವಾನ್ವಿ ರಘು ಆರ್ ರವರು ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
