
ಉದಯವಾಹಿನಿ ಬಾಗೇಪಲ್ಲಿ:ತಾಲ್ಲೂಕಿನ ಕಸಬಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು 2023-24 ನೇ ಸಾಲಿನ ಎರಡನೇ ಹಂತದ ಕರ್ನಾಟಕ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಉಚಿತ ಸಮವಸ್ತ್ರವನ್ನು 8 ,9,ಮತ್ತು10 ನೇ ತರಗತಿಯ ವಿಧ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ವಿತರಣೆ ಮಾಡಿದರು.ತದನಂತರ ಅವರು ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಅವಶ್ಯಕತೆ ಇರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತಿದೆ. ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದರೆ ಸರ್ಕಾರ ನೀಡಿದ ಸೌಲಭ್ಯಗಳಿಗೆ ಮಹತ್ವ ಬರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪಿ.ಎನ್.ನಾರಾಯಣ ಸ್ವಾಮಿ , ಸಿಬ್ಬಂದಿ ವರ್ಗದವರು ರಾಮಚಂದ್ರಪ್ಪ ,ಹೆಚ್.ಆರ್.ರಘುನಾಥ್ ಹಾಗೂ ಮಕ್ಕಳು ಹಾಜರಿದ್ದರು.
