ಉದಯವಾಹಿನಿ, ಮಾಸ್ಕೋ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬೆಂಬಲಿಸುವ ಯುನೈಟೆಡ್ ರಷ್ಯಾ ಪಕ್ಷವು ರಷ್ಯಾ ಬಳಿಯಲ್ಲಿರುವ ನಾಲ್ಕು ಉಕ್ರೇನಿಯನ್ ಪ್ರದೇಶಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮತದಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಇನ್ನು ಚುನಾವಣಾ ಫಲಿತಾಂಶಗಳನ್ನು ಉಕ್ರೇನ್ ಹಾಗೂ ಮಿತ್ರರಾಷ್ಟ್ರಗಳು ಸಹಜವಾಗಿಯೇ ತಳ್ಳಿ ಹಾಕಿವೆ. ರಷ್ಯಾದ ಸ್ಥಳೀಯ ಅಧಿಕಾರಿಗಳು ಪ್ರಕಟಿಸಿದ ದತ್ತಾಂಶವು ಯುದ್ಧದಿಂದ ಜರ್ಜರಿತವಾಗಿರುವ ಪ್ರದೇಶಗಳಲ್ಲಿನ ಮತದಾರರನ್ನು ತೋರಿಸಿದೆ. ಯುನೈಟೆಡ್ ರಷ್ಯಾವನ್ನು ಪ್ರತಿ ಪ್ರದೇಶದಲ್ಲಿ ೭೦ ಪ್ರತಿಶತಕ್ಕಿಂತ ಹೆಚ್ಚು ಮತದಾರರು ಬೆಂಬಲಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಡೊನೆಟ್ಸ್ಕ್, ಲುಗಾನ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶಗಳಲ್ಲಿ ಮತದಾನದ ದಿನಗಳ ಮುಂಚೆಯೇ ಅಧಿಕಾರಿಗಳು ಮೊಬೈಲ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದೂ ಅಲ್ಲದೆ ಮತದಾನ ಕೇಂದ್ರಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಅದೂ ಅಲ್ಲದೆ ೨೦೧೪ರಲ್ಲಿ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಂದಿನಿಂದ ಡೊನೆಟ್ಸ್ಕ್‌ನಲ್ಲಿ ರಷ್ಯಾ ಪರ ಪ್ರತ್ಯೇಕತಾವಾದಿಗಳು ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ಮತದಾನದ ವೇಳೆ ಕೂಡ ಉಕ್ರೇನ್ ಕಡೆಯಿಂದ ಡ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ ಚುನಾವಣಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ರಷ್ಯಾ ಆರೋಪಿಸಿದೆ. ಕ್ರೈಮಿಯಾದಲ್ಲೂ ಸದ್ಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಉಕ್ರೇನ್ ಬಳಿಯಿದ್ದ ನಾಲ್ಕು ಪ್ರದೇಶಗಳನ್ನು ರಷ್ಯಾ ವಶಪಡಿಸಿಕೊಂಡಿದ್ದು, ಇಲ್ಲಿ ಇದೀಗ ಚುನಾವಣೆ ನಡೆಸುವ ಮೂಲಕ ಉಕ್ರೇನ್‌ಗೆ ಆಘಾತ ನೀಡಿದೆ. ಅದೂ ಅಲ್ಲದೆ ಪುಟಿನ್ ಬೆಂಬಲಿತ ಪಕ್ಷ ಇಲ್ಲಿ ಬಹುಮತ ಸಾಧಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!