ಉದಯವಾಹಿನಿ, ನವದೆಹಲಿ: ಜಿ೨೦ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶೃಂಗಸಭೆ ಮುಗಿದ ಬಳಿಕ ಇಬ್ಬರು ಆತ್ಮೀಯವಾಗಿ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ ಅವರ ಮಾತುಕತೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ಸುನಕ್ ಅವರು ಮರದ ಕುರ್ಚಿಯ ಮೇಲೆ ಕುಳಿತಿರುವ ಶೇಖ್ ಹಸೀನಾ ಅವರ ಪಕ್ಕದಲ್ಲಿ ಒಂದು ಮೊಣಕಾಲಿನ ಮೇಲೆ ಕುಳಿತಿರುವಂತೆ ಚಿತ್ರದಲ್ಲಿ ಕಾಣಬಹುದಾಗಿದೆ.
ಈ ಫೋಟೋ ನೋಡಿದ ಹಲವರು ದೊಡ್ಡ ವ್ಯಕ್ತಿಗೆ ಅಹಂ ಇಲ್ಲ, ಪ್ರಧಾನಿಯಾದರೂ ರಿಷಿ ಸುನಕ್ ಅವರು ನೆಲದ ಮೇಲೆ ಕುಳಿತುಕೊಂಡು ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.
ಜಿ ೨೦ ಶೃಂಗಸಭೆಯ ಸಂದರ್ಭದಲ್ಲಿ, ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಗಳ ಪ್ರಗತಿಯನ್ನು ಚರ್ಚಿಸಿದರು ಮತ್ತು ಉಳಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಆಶಾವಾದ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!