ಉದಯವಾಹಿನಿ ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆ ನೀರು ನಿರ್ವಹಣೆ ಮಾಡುತ್ತಿರುವ ಎಲ್ಲಾ 16 ಗ್ಯಾಂಗ್‍ಮ್ಯಾನ್‍ರನ್ನು ಕೂಡಲೇ ಕೆಲಸಕ್ಕೆ ನಿಯೋಜಿಸಬೇಕು. ಎರಡು ತಿಂಗಳ ನಿಂತಿರುವ ಭಾಕಿ ವೇತನ ಕೂಡಲೇ ಪಾವತಿಸಬೇಕು ಎಂದು ನಾರಾಯಣಪುರ ಕಾಲುವೆ ನೀರಾವರಿ ಕಾರ್ಮಿಕರ ತಾಲೂಕ ಸಮಿತಿ ಪದಾಧಿಕಾರಿಗಳು ಕೃ.ಭಾ.ಜ.ನಿ.ನಿ. ಎನ್‍ಆರ್‍ಬಿಸಿ ಕಾಲುವೆ ವಿಭಾಗ ನಂ.4 ಕಚೇರಿ ಮುಂದೆ ಪ್ರತಿಭಟಿಸಿ ಕಾರ್ಯಪಾಲಕ ಅಭಿಯಂತರ ಇಇ ಅನಿಲ ಕುಮಾರ ಅವರಿಗೆ ಮನವಿ ಸಲ್ಲಿಸಿದರು. ವಿಭಾಗದ ಅಚ್ಚುಕಟ್ಟು ಪ್ರದೇಶದ ನೀರಾವರಿಗೆ ಒಳಪಟ್ಟ ಪ್ರದೇಶದನುಗುಣವಾಗಿ ಸಿಬ್ಬಂದಿಗಳ ಅವಶ್ಯಕತೆ ಇರುವ ಬಗ್ಗೆ ಬೇಡಿಕೆಯ ಶಿಫಾರಸ್ಸ್ ಪತ್ರವನ್ನು ಮೇಲಧಿಕಾರಿಗಳಿಗೆ ಕಳಹಿಸಬೇಕು. ಕಾಲುವೆಗೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರ ಮಕ್ಕಳನ್ನು ಹಾಗೂ ನಿರುದ್ಯೋಗ ಯುವಕರನ್ನು ನೀರು ನಿರ್ವಹಣೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ನೀರು ನಿರ್ವಹಣೆಗಾಗಿ ಮಾನವ ಸಂಪನ್ಮೂಲ ಸರಭರಾಜ ಟೆಂಡರ್ ಕರೆಯಲು ಮೇಲಧಿಕಾರಿಗಳಿಗೆ ಶಿಫಾರಸ್ ಮಾಡಬೇಕು. ನೀರು ನಿರ್ವಹಣೆ ಕೆಲಸ ನಂಬಿ ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ವೇತನ ಪಾವತಿ ವಿಳಂಬವಾದ್ದರಿಂದ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಕೂಡಲೇ ಸಂಬಂಧಪಟ್ಟಂತ ಅಧಿಕಾರಿಗಳು ಭಾಕಿ ವೇತನ ಪಾವತಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಬಸವರಾಜ ಮರಕಮದಿನ್ನಿ,  ಹನುಮಂತ ನಾಯಕ ಮೇಟಿ, ಉಮಾಪತಿ, ಮಹಾಂತೇಶ, ಮೌನೇಶ, ಹನುಮಂತಪ್ಪ, ಬಸವರಾಜ, ಚನ್ನಬಸವ, ಬಜ್ಜಪ್ಪ, ಭೀಮಪ್ಪ, ಮೌನೇಶ, ವಿರುಪಾಕ್ಷಿ ಶಿವಶರಣ ಶಾಸ್ತ್ರೀ, ಶಂಶುದ್ಧೀನ್, ದುರುಗಪ್ಪ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!