
ಉದಯವಾಹಿನಿ,ಚಿಂಚೋಳಿ:ತಾಲ್ಲೂಕಿನ ಹಿರಿಯ ಶ್ರೇಣಿ ವಿಭಾಗ ನ್ಯಾಯಾಂಗ ಹಾಗೂ ಪ್ರಧಾನ ಸಿವಿಲ್ ನ್ಯಾಯಾಂಗ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಂಗ ಮೂರು ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದ ಮೇಘಾ ಲೋಕ ಅದಾಲತ್ ನಲ್ಲಿ ಒಟ್ಟಾರೆ 3067ಪ್ರಕರಣದಲ್ಲಿ 611ಪ್ರಕರಣಗಳು ತೆಗೆದುಕೊಂಡು 461ಪ್ರಕರಣಗಳು ಇತ್ಯರ್ಥ ಪಡಿಸಿ ಅಂದಾಜು 48ಲಕ್ಷ ರೂ.ರಾಜಿ ಒಪ್ಪಂದಿಂದ ಸಂಗ್ರಹವಾಗಿದೆ ಎಂದು ತಾಲ್ಲೂಕಾ ಕಾನೂನು ಸೇವಾ ಸಮಿತಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ಹಿರಿಯ ಶ್ರೇಣಿ ವಿಭಾಗ ನ್ಯಾಯಾಂಗದಲ್ಲಿ ಒಟ್ಟು 932ಪ್ರಕರಣದಲ್ಲಿ 42ಪ್ರಕರಣಗಳು ತೆಗೆದುಕೊಂಡು 11ಪ್ರಕರಣ ಇತ್ಯರ್ಥ ಪಡಿಸಿ ಅಂದಾಜು 27ಲಕ್ಷ ರೂ.ರಾಜಿ ಒಪ್ಪಂದದ ಹಣವಾಗಿದೆ,ಪ್ರಧಾನ ಸಿವಿಲ್ ನ್ಯಾಯಾಂಗದಲ್ಲಿ ಒಟ್ಟು 1160 ಪ್ರಕರಣದಲ್ಲಿ 263ಪ್ರಕರಣ ತೆಗೆದುಕೊಂಡು ಅಂದಾಜು 17ಲಕ್ಷ ರೂ.ದಷ್ಟು ಹಣ ರಾಜಿ ಒಪ್ಪಂದದ ಹಣವಾಗಿದೆ,ಹೆಚ್ಚುವರಿ ಸಿವಿಲ್ ನ್ಯಾಯಾಂಗದಲ್ಲಿ ಒಟ್ಟು 975ಪ್ರಕರಣಗಳಲ್ಲಿ 209ಪ್ರಕರಣ ತೆಗೆದುಕೊಂಡು 157ಪ್ರಕರಣ ಇತ್ಯರ್ಥ ಪಡಿಸಿ ಅಂದಾಜು 1ಲಕ್ಷ ರೂ.ರಾಜಿ ಒಪ್ಪಂದದ ಹಣವಾಗಿದ್ದು,ರಾಷ್ಟ್ರೀಕೃತ ಬ್ಯಾಂಕಿನ ವ್ಯಾಜ್ಯ ಪೂರ್ವ ಪ್ರಕರಣಗಳು 669ರಲ್ಲಿ 32ಪ್ರಕರಣ ತೆಗೆದುಕೊಂಡು 30ಪ್ರಕರಣಗಳು ಇತ್ಯರ್ಥ ಪಡಿಸಿ ಅಂದಾಜು 19ಲಕ್ಷ ರೂ.ರಾಜಿ ಒಪ್ಪಂದದ ಹಣವಾಗಿದೆ ಎಂದು ತಿಳಿಸಿದ್ದಾರೆ.ಹಿರಿಯ ಶ್ರೇಣಿ ವಿಭಾಗ ನ್ಯಾಯಾಧೀಶರಾದ ಶ್ರೀಮತಿ ಜ್ಯೋತಿ ಎಸ್.ಕಾಳೆ,ಪ್ರಧಾನ ಸಿವಿಲ್ ನ್ಯಾಯಧೀಶರಾದ ರವಿಕುಮಾರ,ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ದತ್ತಕುಮಾರರವರು ಲೋಕ ಅದಾಲತ್ ಕಾರ್ಯಕ್ರಮ ನಡೆಸಿದರು.ಈ ಸಂದರ್ಭದಲ್ಲಿ ನ್ಯಾಯಾಲಯದ ಎಪಿಪಿಗಳಾದ ಶಾಂತಕುಮಾರ ಪಾಟೀಲ ಹಾಗೂ ಬಾಬಾಸಾಬ ಕಿಣ್ಣಿ,ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುದರ್ಶನ ಬೀರಾದಾರ,ನಾಗಭೂಷಣ್ ಹುಲಗುಂದಿ,ರಾಜೇಂದ್ರ ವರ್ಮ,ವಿಶ್ವನಾಥ ಬೆನಕಿನ,ಶ್ರೀಮಂತ ಕಟ್ಟಿಮನಿ,ಚಂದ್ರಶೇಟ್ಟಿ ಜಾಧವ,ವಿಜಯಕುಮಾರ,ಮಲ್ಲಿಕಾರ್ಜುನ,ಸೂ ರ್ಯಕಾಂತ,ಡಿ.ಕೆ ಚವ್ಹಾಣ,ಶಾಮರಾವ,ಸಂಜುಕುಮಾರ ಮೇತ್ರಿ ಅನೇಕ ವಕೀಲರು,ಅಧಿಕಾರಿಗಳು, ಸಾರ್ವಜನಿಕರು ಇದ್ದರು.
