
ಉದಯವಾಹಿನಿ ತಾಳಿಕೋಟೆ: ಮಕ್ಕಳ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಕಾರ್ಯ ಕಲೋತ್ಸವ , ಪ್ರತಿಭಾ ಕಾರಂಜಿಯಿಂದ ಸಾಧ್ಯವಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದಚೇರಮನ್ ವ್ಹಿಸ.ಹಿರೇಮಠ ಹೇಳಿದರು.ಅವರು ಪಟ್ಟಣದ ಎಸ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ತಾಳಿಕೋಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಡುತ್ತ ಈ ರೀತಿ ಅಭಿಪ್ರಾಯ ಪಟ್ಟರು. ಇಲಾಖೆಯಲ್ಲಿ ಇಸಿಓ ಆಗಿರುವ ಅತಿಥಿ ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಅತಿಥಿಯಾಗಿ ಆಗಮಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ ಮಾತನಾಡಿದರು. ಎಸ್.ಕೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ವೀ.ವಿ ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಪ್ರೌಢಶಾಲಾ ಚೇರಮನ್ ಎಂ.ಜಿ.ಕತ್ತಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಎನ್.ಜಿ.ಓ ಅಧ್ಯಕ್ಷ ನಿಂಗನಗೌಡ ದೊಡಮನಿ,.ಟಿ.ಎಸ್. ಲಮಾಣಿ, ಸರಕಾರಿ ಪ್ರೌಢಶಾಲೆಯ ಮುಖ್ಯಾದ್ಯಾಪಕಿ ಅನಿತಾ ಸಜ್ಜನ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯದ್ಯಾಪಕಿ ಆರ್.ಬಿ.ಆಲೂರ, ಆರ್.ಎಸ್.ಹಿಪ್ಪರಗಿ, ಅಂಬಿಕಾ ಗೋಗಿ,ಅಣ್ಣಪೂರ್ಣ ಹಜೇರಿ ವೇದಿಕೆಯಲ್ಲಿದ್ದರು. ಕುಮಾರಿ ದೀಪಿಕಾ ಕಲ್ಯಾಣಶೆಟ್ಟಿ ಭರತನಾಟ್ಯ ನಡೆಸಿದರು.ಸಿಆರ್ಪಿ ರಾಜಾಸಿಂಗ ವಿಜಾಪುರ ಸ್ವಾಗತಿಸಿದರು, ಸಿಆರ್ಪಿ ಕಾಶಿನಾಥ ಸಜ್ಜನ ವಂದನಾರ್ಪಣ ಸಲ್ಲಿಸಿದರು, ಸುರೇಶ ವಾಲಿಕರ ಕಾರ್ಯಕ್ರಮ ನಿರೂಪಿಸಿದರು.
