ಉದಯವಾಹಿನಿ ಪೀಣ್ಯ ದಾಸರಹಳ್ಳಿ:  ಅರ್ಪಿತಾ ಸೇವಾ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ 16ರಂದು ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ  ಶ್ರೀ ಶ್ರೀ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ  ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ  ಹಾಗೂ ಲಗ್ಗೆರೆ ವಾರ್ಡಿನ ಕಾಂಗ್ರೆಸ್  ಪ್ರಭಾವಿ ನಾಯಕ  ಜನ ಸ್ನೇಹಿ ವಿದ್ಯಾರ್ಥಿ ಮಿತ್ರ  ಲಗ್ಗೆರೆ ನಾರಾಯಣಸ್ವಾಮಿ ನೇತೃತ್ವದಲ್ಲಿ ದಿನಾಂಕ 16 ಸೆಪ್ಟೆಂಬರ್ 2023ರಂದು ಸಂಜೆ 4 ಗಂಟೆಯಿಂದ 8ಗಂಟೆ ವರೆಗೆ  ಲಗ್ಗೆರೆ ವಿಷ್ಣುವರ್ಧನ್ ಆಟದ ಮೈದಾನದಲ್ಲಿ  ಸತ್ಸಂಗ ಕಾರ್ಯಕ್ರಮವನ್ನು ಬಹಳ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಹಮ್ಮಿಕೊಳ್ಳಲಾಗಿದೆ. ಅಂದು  ಬ್ರಹ್ಮಚಾರಿ ಸಾಯಿ ಕೀರ್ತಿ ಜಿ ಮತ್ತು ತಂಡದವರಿಂದ ಸಂಗೀತ ಸುಂದರ ಭಕ್ತಿ ಭಾವದ ಹಾಡುಗಳು ಮುದುರ ಕಂಠದಿಂದ  ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಸಂಸದ ಡಿಕೆ ಸುರೇಶ್ ಕಾಂಗ್ರೆಸ್ನ ಯುವ ನಾಯಕಿ ಕುಸುಮ, ಕಾಂಗ್ರೆಸ್ ಮುಖಂಡ ಜಿ ಧನಂಜಯ,  ಮಾಜಿ ನಗರಸಭಾಧ್ಯಕ್ಷರಾದ ಅಂದಾನಪ್ಪ,  ಹನುಮಂತರಾಯಪ್ಪ, ಮಾಜಿ ಪಾಲಿಕೆ  ಸದಸ್ಯ ಲಕ್ಷ್ಮಿಕಾಂತರೆಡ್ಡಿ, ಲಗ್ಗೆರೆ, ಲಕ್ಷ್ಮೀದೇವಿ ನಗರ, ರಾಜಗೋಪಾಲನಗರ,ಹೆಗ್ಗನಹಳ್ಳಿ, ಸುಂಕದಕಟ್ಟೆ, ವಾರ್ಡಗಳ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ಸಾರ್ವಜನಿಕರು  ಭಾಗವಹಿಸುವರು ಎಂದು ಲಗ್ಗೆರೆ ನಾರಾಯಣ ಸ್ವಾಮಿ ಉದಯ ವಾಹಿನಿ  ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!