
ಉದಯವಾಹಿನಿ ಇಂಡಿ : ಇಂಡಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ,ಅಕ್ಷಯ ಪ್ರಕಾಶನ ಲೋಣಿ ಬಿ ಕೆ ವತಿಯಿಂದ ಇದೇ ಸಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮದ ಶ್ರೀ ಸಿದ್ದೇಶ್ವರ ಮಾಧ್ಯಮಿಕ ಶಾಲಾ ಆವರಣದಲ್ಲಿ “ಜ್ಞಾನಯೋಗಿಗೆ ಕವನದಾರತಿ”ಗ್ರಂಥ ಬಿಡುಗಡೆ ಸಮಾರಂಭ ಜರುಗಲಿದೆ.ತದ್ದೇವಾಡಿ ಹಿರೇಮಠದ ಪೂಜ್ಯಶ್ರೀ ಮಹಾಂತೇಶ ಸ್ವಾಮೀಜಿ ಸಾನಿಧ್ಯ ವಹಿಸುವರು. ಇಂಡಿ ಪಿ ಎಲ್ ಡಿ ಬ್ಯಾಂಕ್ ಹಾಗೂ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ ಎಂ ಕೋರೆ ಅವರು ಅಧ್ಯಕ್ಷತೆ ವಹಿಸುವರು. ವಿಜಯಪುರದ ಡಾ.ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ ಎಸ್ ಮದಭಾವಿ ಗ್ರಂಥ ಬಿಡುಗಡೆ ಮಾಡುವರು. ವಿಜಯಪುರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಗ್ರಂಥ ಪರಿಚಯಿಸುವರು.ಮುಖ್ಯ ಅತಿಥಿಗಳಾಗಿ ಲೋಣಿ ಬಿ ಕೆ ಗ್ರಾಮದ ಹಿರಿಯ ಅಧ್ಯಾತ್ಮವಾದಿಗಳಾದ ಶ್ರೀನಿವಾಸ ಕುಲಕರ್ಣಿ,ಅಕ್ಕಮಹಾದೇವಿ-ಅಲ್ಲಮಪ್ರಭು ದೇವರ ಅಚಲ ಮಂಟಪದ ಅಧ್ಯಕ್ಷ ಶಶಿಧರ ಕಲ್ಯಾಣಶೆಟ್ಟಿ,ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಹಿಪ್ಪರಗಿ ಅವರು ಆಗಮಿಸುವರು.ಗ್ರಂಥದ ಸಂಪಾದಕರಾದ ಡಾ.ಸಂಗಮೇಶ ಆಯ್ ಮೇತ್ರಿ, ಡಾ.ವ್ಹಿ ಡಿ ಐಹೊಳ್ಳಿ ಭಾಗವಹಿಸುವರು.ಈ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಜಿಲ್ಲೆಯ ಎಲ್ಲ ಸಾಹಿತ್ಯ ಆಸಕ್ತರು,ಶಿಕ್ಷಕರು,ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
