
ಉದಯವಾಹಿನಿ, ಕೋಲಾರ :- ಜಿಲ್ಲೆಯ ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಚಿಕ್ಕನಲ್ಲಾಲ ಗ್ರಾಮದ ವಾಸಿ ಕೃಷ್ಣಮೂರ್ತಿ ಬಿನ್ ಚಿಕ್ಕಮುನಿಯಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿರುವ ಆರೋಪವು ರುಜುವಾತಾದ ಹಿನ್ನಲೆ ಕೋಲಾರ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ.ಸದರಿ ಆರೋಪಿ ವಿರುದ್ದ ಮಾಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಸಿ.ಆರ್. ನಂ. 386/2021 ರಂತೆ ಕಲಂ 363, 343,376 (2) (ಎನ್) ಐ.ಪಿ.ಸಿ. ಕಲಂ 4 ಮತ್ತು 6ರ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ.(ಪೋಕ್ಸೋ) 29/2022 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಕೃಷ್ಣಮೂರ್ತಿಗೆ ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಸಜೆ ಜೊತೆಗೆ ರೂ.40 ಸಾವಿರರೂ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳು ಸಜೆ ವಿಧಿಸಿದ್ದಾರೆ.ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.
