ಉದಯವಾಹಿನಿ, ಕೆ.ಆರ್.ಪೇಟೆ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾಕಾರಂಜಿ ಸೂಕ್ತ ವೇದಿಕೆಯಾಗಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕೆಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಹೆಚ್. ಕೆ ಮಂಜುನಾಥ್ ಹೇಳಿದರು.ಅವರು ತಾಲೂಕಿನ ತೆಂಡೆಕೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶೀಳನೆರೆ ಹೋಬಳಿ ಮಟ್ಟದ ಪ್ರೌಢಶಾಲೆಗಳ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸಮಾರಂಭದಲ್ಲಿ ಮಾತನಾಡಿದರು ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಅದು ನಮ್ಮ ಒಳಗಿನ ಅಂತ ಸತ್ವದ ಗಣಿಯಾಗಿದೆ ಸೂಕ್ತವಾದ ವೇದಿಕೆ ಸಿಕ್ಕಿದರೆ ಅದು ಅನಾವರಣಗೊಳ್ಳುತ್ತದೆ ಇದಕ್ಕೆ ಮಹಾಭಾರತದ ಏಕಲವ್ಯನನ್ನು ಉದಾಹರಿಸಬಹುದು .ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಕಾರ್ಯವನ್ನು ಸದಾ ಮಾಡುತ್ತಿರಬೇಕು .ಯಾವ ಮಗುವು ದಡ್ಡನಲ್ಲ ಪ್ರತಿಯೊಂದು ಮಗುವಿಗೂ ತನ್ನದೇ ಆದ ಬುದ್ಧಿಶಕ್ತಿ ಇರುತ್ತದೆ .ಅದನ್ನು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ. ಓದು ಮತ್ತು ಬರಹ ಮಾತ್ರ ಶಿಕ್ಷಣವಲ್ಲ. ಪಠ್ಯೇತರ ಕಲಿಕೆಯು ಸಹ ಶಿಕ್ಷಣವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಂಸ್ಕೃತಿಕ ಸಾಹಿತ್ಯ ,ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಸಮಾರಂಭವನ್ನು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜೇಶ್ ಉದ್ಘಾಟಿಸಿ ಶುಭ ಹಾರೈಸಿದರು. ತಂಡೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಆಯೋಜಕರಾದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುತ್ತುರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಳನೆರೆ ಹೋಬಳಿ ಇಸಿಓ ಮೋಹನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಕಾರ್ಯದರ್ಶಿ ಗಂಟೆಯ್ಯ, ತಾಲ್ಲೂಕು ಶಿಕ್ಷಣ ಸಂಯೋಜಕ ಜ್ಞಾನೇಶ್, ಕೃಷ್ಣನಾಯಕ್, ಬಿ.ಆರ್.ಪಿ.ಮಂಜು, ಸಿಆರ್.ಪಿಗಳಾದ ಬಿ.ಎಸ್.ಮಹೇಶ್, ಪ್ರಕಾಶ್, ಅಣ್ಣಯ್ಯ. ಪ್ರಾಂಶುಪಾಲ ಮಂಜುನಾಥ್ ಶಿಕ್ಷಕರಾದ ದೇವರಾಜು, ಜವರಪ್ಪ, ಹರೀಶ್, ಶಿವಕುಮಾರ್, ವಿಜ್ಞಾನಶಿಕ್ಷಕಿ ಸುಮಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜು ಸೇರಿದಂತೆ ತೆಂಡೇಕೆರೆ, ಚಟ್ಟಂಗೆರೆ, ಶೀಳನೆರೆ, ನೀತಿಮಂಗಲ, ಸಿಂಧುಘಟ್ಟ ಸರ್ಕಾರಿ ಪ್ರೌಡಶಾಲೆ, ಶೆಟ್ಟನಾಯಕನಹಳ್ಳಿ ಕೊಪ್ಪಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು.
