ಉದಯವಾಹಿನಿ, ದೇವರಹಿಪ್ಪರಗಿ: ಶರಣರ ದಾಸೋಹ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕನ್ನೇರಿಯ ಸಿದ್ದಗಿರಿ ಮಠದ ಪ.ಪೂ. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಧರ್ಮಸಭೆಯಲ್ಲಿ ಪಾವನಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,
ಕನ್ನಡ ನಾಡು ಶರಣರು, ಸಂತರು ಜನಿಸಿದ ಪುಣ್ಯಭೂಮಿಯಾಗಿದೆ. ಯುವ ಜನತೆ ಆಧುನಿಕತೆ ಜತೆಗೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಅರಿತು ಬಾಳಬೇಕಾಗಿದೆ, ಸಮಾಜದಲ್ಲಿನ ಮೂಢನಂಬಿಕೆ ಹೋಗಲಾಡಿಸುವ ಕಾರ್ಯ ನಡೆಯಬೇಕಿದೆ. ಶರಣರ, ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸತ್ಸಂಗದಲ್ಲಿ ಭಾಗವಹಿಸುವುದರಿಂದ ಅಧ್ಯಾತ್ಮ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ, ಆರೋಗ್ಯ ಮತ್ತು ಉತ್ತಮ ಪರಿಸರ ನಿರ್ಮಾಣ ಮಾಡಲು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಯುವ ಜನತೆಗೆ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ ಅವರು ಮಾತನಾಡಿ. ಸಂತೃಪ್ತ ಜೀವನ ಮಾಡಬೇಕಾದರೆ ಪುರಾಣ ಪ್ರವಚನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಮಾತನಾಡಿ,ಕನ್ನೇರಿ ಮಠ ಧರ್ಮ ಪ್ರಸಾರ ಮಾಡುವುದರ ಜೊತೆಗೆ ಕೃಷಿ ಕಾಯಕ ಮಾಡುವ ಮೂಲಕ ಕಾಯಕದ ಕುರಿತು ಜಾಗೃತಿ ಮೂಡಿಸುವ ಜೋತೆ ಸನಾತನ ಧರ್ಮ ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು ಶ್ಲಾಘನೀಯವಾಗಿದೆ ,ಶ್ರಾವಣ ಮಾಸದಲ್ಲಿ ಎಲ್ಲಾ ಶ್ರೀಗಳನ್ನು ಒಟ್ಟಿಗೆ ನೋಡುವ ಭಾಗ್ಯ ಒದಗಿಸಿದ ಗ್ರಾಮಸ್ಥರಿಗೆ ಧನ್ಯವಾದಗಳು ತಿಳಿಸಿದರು.ಕಾರ್ಯಕ್ರಮದ ನೇತೃತ್ವವನ್ನು ಇಟಗಿ ಹಾಗೂ ಸಾತಿಹಾಳ ಗ್ರಾಮದ ಹಿರೇಮಠದ ಭೂಕೈಲಾಸ ಮೇಲುಗದ್ದುಗೆಯ 108 ಶ್ರೀ ಷ.ಬ್ರ. ಗುರುಶಾಂತವೀರ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ದೇವರ ಹಿಪ್ಪರಗಿ ಗದ್ದುಗೆ ಮಠದ ಶ್ರೀ ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಗಳು, ಶ್ರೀ ಷ.ಬ್ರ.ಗುರು ಜಯಸಿದ್ದೇಶ್ವರ ಮಹಾಸ್ವಾಮಿಜಿಗಳು, ಬಸವನಬಾಗೇವಾಡಿಯ ಹಿರೇಮಠದ ಶ್ರೀ ಷ.ಬ್ರ. ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು, ಭೈರವಾಡಗಿ ಗ್ರಾಮದ ಶ್ರೀ ಪ. ‌ಪೂ. ಗುರುಪ್ರಸಾದ ಮಹಾಸ್ವಾಮಿಗಳು, ರಬಿನಾಳದ ಲಿಂಗರಾಜ ಮಹಾರಾಜರು ಭಾಗವಹಿಸಿ ಆಶೀರ್ವಚನ ನೀಡಿದರು.ಪುರಾಣ ಪ್ರಸ್ತುತಪಡಿಸಿದ ವೇ.ಮೂ ಸಂಗಮೇಶ್ವರ ಶಾಸ್ತ್ರಿಗಳಿಗೆ ಸನ್ಮಾನಿಸಿದರು. ಬೆಳಗ್ಗೆ ಅಕ್ಕಮಹಾದೇವಿ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಿತು. ನಂತರ ಭಾವಚಿತ್ರದೊಂದಿಗೆ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಖಂಡಕಿಯ ಶ್ರೀ ಹನುಮಾನ ಸಂಬಾಳ ಹಾಗೂ ಕರಡಿ ಮಜಲು, ವಾದ್ಯ, ವೈಭವಗಳೊಂದಿಗೆ ಸುಮಂಗಲಿಯರ ಕುಂಭಾಭಿಷೇಕ ಅದ್ಧೂರಿಯಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ,ಯುವ ಮುಖಂಡರಾದ ಸಂಗನಗೌಡ ಪಾಟೀಲ ಸಾಸನೂರ, ಮುಖಂಡರುಗಳಾದ ಕೊಣಪ್ಪ ಪಾಟೀಲ, ಚಿದಾನಂದ ಡೋಣೂರ, ಬಾಳ ಸಾಹೇಬಗೌಡ ಪಾಟೀಲ, ಎಸ್.ಎ. ಬಿರಾದಾರ,ಶಿವು ಅವಟಿ, ನಾನಾಗೌಡ ನಾಗರಬೆಟ್ಟ, ಶರಣಪ್ಪ ಸಾಸಟ್ಟಿ, ಸುನೀಲ ಮಾಗಿ, ಕಲ್ಯಾಣಯ್ಯ ಮಠ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ದಂಡಪ್ಪಗೌಡ ಪಾಟೀಲ, ಶಿಕ್ಷಕರಾದ ಬಿ.ಕೆ.ಪಾಟೀಲ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!